ಕರೊನಾ ಸೋಂಕಿಗೆ ಇಬ್ಬರ ಸಾವು

B SHARAT DC Photo
Published on


ಕಲಬುರಗಿ : ಜಿಲ್ಲೆಯಲ್ಲಿ ಮಂಗಳವಾರವೂ ಕರೊನಾ ಮಹಾಸ್ಫೋಟ ಮುಂದುವರಿದಿದ್ದು, ಜಿಲ್ಲೆಯಲ್ಲಿ 53 ಜನಕ್ಕೆ ಪಾಸಿಟಿವ್ ಬಂದಿದೆ. ಇಬ್ಬರು ಸಾವನ್ನಪ್ಪಿದ್ದಾರೆ. ಸೋಂಕಿತರ ಸಂಖ್ಯೆ 1750ಕ್ಕೇರಿದೆ. ದಿನೇದಿನೆ ಹೆಚ್ಚುತ್ತಿರುವ ಪಾಸಿಟಿವ್ ಮತ್ತು ಸಾವಿನ ಪ್ರಕರಣಗಳು ಜಿಲ್ಲೆ ಜನರನ್ನು ತಲ್ಲಣರಾಗುವಂತೆ ಮಾಡಿವೆಯಾದರೂ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿರುವುದು ಸಮಾಧಾನ ತಂದಿದೆ. ಮಂಗಳವಾರ 19 ಜನ ಚೇತರಿಸಿಕೊಂಡಿದ್ದಾರೆ.
ಈವರೆಗೆ ಚೇತರಿಸಿಕೊಂಡವರ ಸಂಖ್ಯೆ 1329ಕ್ಕೇರಿದಂತಾಗಿದ್ದು, 392 ಸಕ್ರೀಯ ಪ್ರಕರಣಗಳಿವೆ. ಮೃತರ ಸಂಖ್ಯೆ 29ಕ್ಕೇರಿದೆ. ಈ ಮಧ್ಯೆ ಕೋವಿಡ್ ಆಸ್ಪತ್ರೆಯ ಐಸಿಯುದಲ್ಲಿರುವವರ ಸಂಖ್ಯೆ 7ಕ್ಕೆ ಇಳಿಕೆಯಾಗಿದೆ. ಒಬ್ಬರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. 17 ಐಎಲ್ಐ ಪ್ರಕರಣಗಳು, ಹತ್ತು ಸಾರಿ ಪ್ರಕರಣ, ಸೋಂಕಿತರ ಸಂಪರ್ಕಕ್ಕೆ ಬಂದವರು 16, ಅಂತರ್ ಜಿಲ್ಲಾ ಸಂಪರ್ಕ ಒಬ್ಬರು, ಕಂಟೇನ್ಮೆಂಟ್ ಝೋನ್ ಸಂಪರ್ಕ ಒಬ್ಬರಿಗೆ ಸೋಂಕು ತಗುಲಿದ್ದು, ಉಳಿದವರು ಮಹಾರಾಷ್ಟ್ರ ರಾಜ್ಯದ ಸಂಪರ್ಕ ಹೊಂದಿದವರು ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
17 ಜನ ಮಹಿಳೆಯರಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರೆಲ್ಲರನ್ನು ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net