

ಮುಂಡರಗಿ: ಪಟ್ಟಣದ ನೇಕಾರ ಓಣಿಯ ನಿವಾಸಿ, ಕರೊನಾ ವೈರಸ್ ಸೋಂಕಿತ 75 ವರ್ಷದ ವೃದ್ಧ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಬುದ್ಧಿಮಾಂದ್ಯರಾಗಿದ್ದ ಇವರು ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದರು. ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ಜೂ.23ರಂದು ಜಿಮ್್ಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಗಂಟಲ ದ್ರವ ಪರೀಕ್ಷೆ ನಡೆಸಿದಾಗ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿತ್ತು. ನಂತರ ಅವರನ್ನು ಕೋವಿಡ್-19 ಆಸ್ಪತ್ರೆಯ ಐಸಿಯುಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಅಧಿಕ ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ನಿಧನ ಹೊಂದಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಕೋವಿಡ್-19 ಸೋಂಕಿನಿಂದ ಮೃತರಾದವರ ಸಂಖ್ಯೆ ನಾಲ್ಕಕ್ಕೆ ಏರಿದೆ.
ಅಂತ್ಯಕ್ರಿಯೆ: ತಾಲೂಕು ಆಡಳಿತದಿಂದ ಪಟ್ಟಣದ ರುದ್ರಭೂಮಿಯಲ್ಲಿ ಮೃತನ ಅಂತ್ಯಕ್ರಿಯೆಯನ್ನು ಕೋವಿಡ್ 19 ನಿಯಮದಂತೆ ನೆರವೇರಿಸಲಾಯಿತು. ಅಂತ್ಯಕ್ರಿಯೆಯಲ್ಲಿ ಮೃತ ವೃದ್ಧನ ಪತ್ನಿ, ಮಗಳು, ಮಗ ಮತ್ತು ಸೊಸೆ ಪಾಲ್ಗೊಂಡಿದ್ದರು ಎಂದು ಪ್ರಭಾರಿ ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ್ರ ತಿಳಿಸಿದ್ದಾರೆ.
ಇಬ್ಬರಿಗೆ ಸೋಂಕು
ಗದಗ: ಜಿಲ್ಲೆಯಲ್ಲಿ ಗುರುವಾರ ಮತ್ತೆ ಇಬ್ಬರಿಗೆ ಕರೊನಾ ವೈರಸ್ ಸೋಂಕು ದೃಢಪಟ್ಟಿದೆ. ಧಾರವಾಡ ಮತ್ತು ಕೊಪ್ಪಳ ಜಿಲ್ಲೆಗಳಿಗೆ ಭೇಟಿ ನೀಡಿ ಜೂ. 27ರಂದು ಆಗಮಿಸಿದ್ದ ನಗರದ ವೀರನಾರಾಯಣ ದೇವಸ್ಥಾನದ ಹತ್ತಿರದ ನಿವಾಸಿ 33 ವರ್ಷದ ಪುರುಷ ಮತ್ತು ಮಧ್ಯಪ್ರದೇಶದಿಂದ ಜೂ. 25ರಂದು ನಗರಕ್ಕೆ ಆಗಮಿಸಿ ಕ್ವಾರಂಟೈನ್ನಲ್ಲಿದ್ದ ಗದಗ ತಾಲೂಕಿನ ಹೊಂಬಳ ಗ್ರಾಮದ ಕಲ್ಮೇಶ್ವರ ನಗರದ ನಿವಾಸಿ 28 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಸದ್ಯ ಸೋಂಕಿತರನ್ನು ಜಿಮ್್ಸ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಸಂರ್ಪತರ ಪತ್ತೆ ಕಾರ್ಯ ಆರಂಭವಾಗಿದೆ. ಜಿಲ್ಲೆಯಲ್ಲಿ ಈವರೆಗೆ 180 ಜನರಿಗೆ ಸೋಂಕು ದೃಢಪಟ್ಟಿದ್ದು, ಇದರಲ್ಲಿ ನಾಲ್ವರು ಮೃತಪಟ್ಟಿದ್ದಾರೆ. 53 ಜನರು ಗುಣವಾಗಿದ್ದಾರೆ. 124 ಸಕ್ರಿಯ ಕೇಸ್ಗಳು ಇವೆ ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ತಿಳಿಸಿದ್ದಾರೆ.
ಇಂದಿನ ಸೋಂಕು ಪ್ರಕರಣ 2
ಇದುವರೆಗೆ ನಿಗಾದಲ್ಲಿ ಇರುವವರು 9907
ಸೋಂಕು ಪರೀಕ್ಷೆಗಾಗಿ ಒಟ್ಟು ಸಂಗ್ರಹಿಸಿದ ಗಂಟಲ ದ್ರವ ಮಾದರಿ ಸಂಖ್ಯೆ 10339
ಆಸ್ಪತ್ರೆಗಳಲ್ಲಿ ಐಸೋಲೇಷನ್ನಲ್ಲಿ ಇರುವವರು 85
ಪಾಸಿಟಿವ್ ಪ್ರಕರಣ 180
ಸಕ್ರಿಯ ಪ್ರಕರಣಗಳು 124
ನೆಗೆಟಿವ್ ವರದಿಗಳು 10064
ಗುಣಮುಖರಾದವರ ಸಂಖ್ಯೆ 69
ವರದಿ ಬರಲು ಬಾಕಿ ಇರುವ ಸಂಖ್ಯೆ 248
ಕರೊನಾ ರೋಗಕ್ಕೆ ತುತ್ತಾಗಿ ಮೃತಪಟ್ಟವರು ಸಂಖ್ಯೆ 4
ಏಳು ದಿನ ಕ್ವಾರಂಟೈನ್ನಲ್ಲಿ ಇರುವವರ ಸಂಖ್ಯೆ 425
ಡಿಸಿ ಕಚೇರಿ ನಂ (ಸಹಾಯವಾಣಿ): 08372-239177