ಕರೊನಾ ಸೋಂಕಿಗೆ ಮತ್ತೊಬ್ಬ ಬಲಿ

carona logo
Published on

ಗದಗ: ಜಿಲ್ಲೆಯಲ್ಲಿ ಗುರುವಾರ 110 ಜನರಿಗೆ ಕರೊನಾ ವೈರಸ್ ತಗುಲಿದ್ದು, 78 ಸೋಂಕಿತರು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಸೋಂಕಿನಿಂದ ಒಬ್ಬ ಮೃತಪಟ್ಟಿದ್ದಾನೆ.

ಕೋವಿಡ್-19 ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು: ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ಬಸವೇಶ್ವರ ದೇವಸ್ಥಾನದ ಹತ್ತಿರ, ಹುಡ್ಕೋ ಕಾಲನಿ, ಜಿಮ್ಸ್, ಸರಾಫ್ ಬಜಾರ, ಅಂಬಾ ಭವಾನಿ ದೇವಸ್ಥಾನದ ಹತ್ತಿರ, ದಾಸರ ಓಣಿ, ಸಾಯಿ ನಗರ, ಬೆಟಗೇರಿ, ರಾಧಾಕೃಷ್ಣ ನಗರ, ಪುಟ್ಟರಾಜ ನಗರ, ಮಿಷನ್ ಕಾಂಪೌಂಡ್, ಮಸಾರಿ, ಗಂಗಾಪುರ ಪೇಟೆ, ಕೆ.ಎಸ್.ಆರ್.ಟಿ.ಸಿ. ಕಾಲನಿ, ರಾಚೋಟೇಶ್ವರ ನಗರ, ನೆಹರು ರೋಡ್, ಅನ್ನದಾನೇಶ್ವರ ಪ್ಲಾಟ್, ಹುಯಿಲಗೋಳ ರಸ್ತೆ, ಈಶ್ವರ ಕಾಲನಿ, ಗಾರ್ಗಿ ಪೇಟೆ, ಟ್ಯಾಗೋರ್ ರಸ್ತೆ, ರಾಜೀವ ಗಾಂಧಿ ನಗರ, ನರಸಾಪುರ, ಅಮರೇಶ್ವರ ನಗರ, ಮಕಾನಗಲ್ಲಿ, ವಿವೇಕಾನಂದ ನಗರ, ಸಿ.ಎಸ್.ಐ ಕ್ವಾಟರ್ಸ್, ಕುರಟ್ಟಿ ಪೇಟೆ, ಶಹಪುರಪೇಟೆ, ಕಬಾಡಿ ರಸ್ತೆ, ಕಿಲ್ಲಾ ಓಣಿ, ವಕೀಲ ಚಾಳ,ಬಾಲಾಜಿ ನಗರ, ಎಸ್.ಬಿ. ನಗರ, ಶರಣ ಬಸವೇಶ್ವರ ನಗರ, ಗದಗ ತಾಲೂಕಿನ ಯಲಿಶಿರೂರ, ಶಿರುಂಜ, ಕಣಗಿನಹಾಳ, ಸೊರಟೂರ, ಬೆಂತೂರ, ಕಳಸಾಪುರ, ಮುಂಡರಗಿ ಎ.ಡಿ. ನಗರ, ಹೈದರ ನಗರ, ತಾಲೂಕಿನ ಕಕ್ಕೂರ ತಾಂಡಾ, ಡಂಬಳ, ಪೇಠಾಲೂರ, ಡೋಣಿ, ಜಂತ್ಲಿ ಶಿರೂರ, ಮುಂಡವಾಡ, ಕೊರ್ಲಳ್ಳಿ, ನರಗುಂದ ತಾಲೂಕಿನ ಶಿರೋಳ, ಅಸೂಟಿ ಆಸ್ಪತ್ರೆ, ಕಲಕೇರಿ, ವಿನಾಯಕ ನಗರ, ರೋಣ ಪಟ್ಟಣದ ಗೌಡರ ಓಣಿ, ರೋಣ ತಾಲೂಕಿನ ನರೇಗಲ್, ಸಿಎಚ್.ಸಿ. ಕ್ವಾಟರ್ಸ್ ಗಜೇಂದ್ರಗಡ, ಮುಗಳಿ ರಸ್ತೆ, ಅಬ್ಬಿಗೇರಿ,ಹುನಗುಂಡಿ,ಬೆಳವಣಕಿ, ಇಟಗಿ. ಶಿರಹಟ್ಟಿ ತಾಲೂಕಿನ ಯಲ್ಲಾಪೂರ, ಅಡರಳ್ಳಿ, ಖಾನಾಪುರ, ಸುವರ್ಣಗಿರಿ, ಲಕ್ಷ್ಮೇಶ್ವರದ ಹಿರೇಬಣ, ಮಾಗಡಿ, ಬೆಳ್ಳಟ್ಟಿ, ಮಂಗಳಾಪುರ, ರಾಮಗಿರಿ ಪ್ರದೇಶದಲ್ಲಿ ಸೋಂಕು ಪತ್ತೆಯಾಗಿದೆ. ನಗರದ ಖಾನತೋಟದ ನಿವಾಸಿ 32 ವರ್ಷದ ಪುರುಷ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ತಿಳಿಸಿದ್ದಾರೆ.

110: ಇಂದಿನ ಸೋಂಕಿತರು, 38242: ನಿಗಾದಲ್ಲಿ ಇರುವವರು, 39082: ಮಂದಿಯ ಗಂಟಲದ್ರವ ಸಂಗ್ರಹ, 1244: ಆಸ್ಪತ್ರೆಯಲ್ಲಿ ಐಸೋಲೇಷನ್​ನಲ್ಲಿ ಇರುವವರು, 4626: ಪಾಸಿಟಿವ್ ಪ್ರಕರಣಗಳು, 3311: ಗುಣವಾಗಿ ಬಿಡುಗಡೆಯಾದವರು, 1244: ಸಕ್ರಿಯ ಪ್ರಕರಣಗಳು, 446: ಬಾಕಿ ಇರುವ ವರದಿಗಳು, 34014: ನೆಗೆಟಿವ್ ಮಾದರಿಗಳು, 71: ಮೃತರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net