ಕರೊನಾ ಸೇನಾನಿಗಳಿಗೆ ಹೂಮಳೆ

Published on

ಮೈಸೂರು: ನಜರ್‌ಬಾದ್‌ನಲ್ಲಿ ಗುರುವಾರ ಕರೊನಾ ಸೇನಾನಿಗಳಿಗೆ ವಾದ್ಯಗಳ ಹಿಮ್ಮೇಳದಲ್ಲಿ ಹೂಮಳೆ ಸುರಿಸುವ ಮೂಲಕ ಕೃತಜ್ಞತೆ ಅರ್ಪಿಸಲಾಯಿತು.
ವ್ಯಕ್ತಿಯೊಬ್ಬರಿಗೆ ಕರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಲ್ಲಿಯ ಪ್ರದೇಶವನ್ನು ಕಂಟೇನ್ಮೆಂಟ್ ವಲಯವೆಂದು ಗುರುತಿಸಿ, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಓಡಾಡದಂತೆ ನಿರ್ಬಂಧಿಸಲಾಗಿತ್ತು. ಇದೀಗ ನಜರ್‌ಬಾದ್ ಕಂಟೇನ್ಮೆಂಟ್ ವಲಯದಿಂದ ಹೊರಬಂದಿದ್ದು, ಸಾರ್ವಜನಿಕರ ಓಡಾಟಕ್ಕೆ ಮುಕ್ತವಾಗಿದೆ.
ಇಲ್ಲಿ ಕರೊನಾ ಹತೋಟಿಗೆ ಶ್ರಮವಹಿಸಿದ ಪೊಲೀಸರಿಗೆ, ಮಹಾನಗರ ಪಾಲಿಕೆ ಅಧಿಕಾರಿಗಳು, ಪೌರಕಾರ್ಮಿಕರು, ಆರೋಗ್ಯಾಧಿಕಾರಿಗಳಿಗೆ ಅಲ್ಲಿನ ಸ್ಥಳೀಯ ನಿವಾಸಿಗಳು ವಿಶಿಷ್ಟವಾಗಿ ಗೌರವ ಸಲ್ಲಿಸಿದರು.
ಪಾಲಿಕೆ ಸದಸ್ಯ ಸತೀಶ್, ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀಕಾಂತ್, ಪೊಲೀಸ್ ಸಿಬ್ಬಂದಿ ಚನ್ನಬಸಪ್ಪ, ಎಸಿ ನಾಗರಾಜ್, ಪಾಲಿಕೆಯ ಅಧಿಕಾರಿ ಮೈತ್ರಿ ಮತ್ತಿತರರು ಈ ಸಂದರ್ಭದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net