ಕರೊನಾ ಸೇನಾನಿಗಳ ಸೇವೆ ಸ್ಮರಣೀಯ

3MNL2
ಮುನವಳ್ಳಿ ಪಟ್ಟಣದ ಪುರಸಭೆ ಆವರಣದಲ್ಲಿ ಕರೊನಾ ಸೇನಾನಿಗಳಿಗೆ ಆಹಾರ, ಔಷಧ ಕಿಟ್ ವಿತರಿಸಲಾಯಿತು. ಮುರುಘೇಂದ್ರ ಶ್ರೀ, ರವೀಂದ್ರ ಯಲಿಗಾರ, ಯಶವಂತ ಯಲಿಗಾರ ಇತರರಿದ್ದರು.
Published on

ಮುನವಳ್ಳಿ: ಕರೊನಾ ಸೇನಾನಿಗಳ ರೂಪದಲ್ಲಿ ದೇವರೇ ಬಂದು ನಮಗೆಲ್ಲ ಸಹಾಯ ಮಾಡುತ್ತಿದ್ದಾನೆ. ಸೇನಾನಿಗಳನ್ನು ನಾವು ಗೌರವಿಸಿದರೆ ದೇವರನ್ನು ಗೌರವಿಸಿದಂತಾಗುತ್ತದೆ ಎಂದು ಮುರುಘೇಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ಯೂಥ್ ಕಾಂಗ್ರೆಸ್ ವತಿಯಿಂದ ಕರೊನಾ ಸೇನಾನಿಗಳಿಗೆ ಗುರುವಾರ ಆಹಾರ, ಔಷಧ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರೊನಾ ಕಾಲದಲ್ಲಿ ಸೇನಾನಿಗಳ ಜತೆಗೆ ಯೂಥ್ ಕಾಂಗ್ರೆಸ್‌ನವರೂ ಕೈಜೋಡಿಸಿರುವುದು ಶ್ಲಾಘನೀಯ ಕೆಲಸ ಎಂದರು. ಮುನವಳ್ಳಿ ಯರಗಟ್ಟಿ ಬ್ಲಾಕ್ ಯೂಥ್ ಕಾಂಗ್ರೆಸ್ ಅಧ್ಯಕ್ಷ ಯಶವಂತ ಯಲಿಗಾರ ಮಾತನಾಡಿ, ಜನರು ಸಂಕಷ್ಟದಲ್ಲಿದ್ದಾಗ ಕಾಂಗ್ರೆಸ್ ಪಕ್ಷ ಸದಾ ಸ್ಪಂದಿಸುತ್ತದೆ. ಲಾಕ್‌ಡೌನ್ ಸಮಯದಲ್ಲಿ ಅಲೆಮಾರಿ ಜನರಿಗೆ, ನಿರ್ಗತಿಕರಿಗೆ ಹಾಗೂ ಕೆಲಸವಿಲ್ಲದವರಿಗೆ ಈಗಾಗಲೇ ಆಹಾರ ಕಿಟ್ ಹಾಗೂ ಔಷಧ ಕಿಟ್‌ಗಳನ್ನು ಒದಗಿಸಲಾಗುತ್ತದೆ ಎಂದರು. ರವೀಂದ್ರ ಯಲಿಗಾರ, ಪಂಚನಗೌಡ ದ್ಯಾಮನಗೌಡರ, ಎಂ.ಆರ್.ಗೋಪಶೆಟ್ಟಿ, ಪುರಸಭೆ ಅಧ್ಯಕ್ಷ ವಿಜಯ ಅಮಠೆ, ದುಂಡಪ್ಪ ಬುರ್ಜಿ, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾಣಿ, ಸಿ.ಬಿ.ಬಾಳಿ, ಚಂದ್ರು ಜಂಬ್ರಿ, ಈರಣ್ಣ ಕಮ್ಮಾರ, ಸಾಗರ ಯಲಿಗಾರ, ದಾನು ಗದಗಿನ, ವಿಲಾಸ ಗರಗ, ಸಾಗರ ಪಟ್ಟಣಶೆಟ್ಟಿ, ಪ್ರಜ್ವಲ ಅಷ್ಟಗಿಮಠ, ವಿವೇಕ ಕಮ್ಮಾರ, ಅಕ್ಷಯ ಕಡಕೋಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net