

ಧಾರವಾಡ: ಜಿಲ್ಲೆಯಲ್ಲಿ ಶನಿವಾರ 186 ಜನರಿಗೆ ಕರೊನಾ ತಗುಲಿರುವುದು ದೃಢಪಟ್ಟಿದ್ದು, ಇದು ಒಂದು ದಿನದ ಅತ್ಯಂತ ಹೆಚ್ಚಿನ ಪ್ರಕರಣವಾಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ 1917ಕ್ಕೆ ಏರಿದೆ. ಶನಿವಾರ 6 ಜನ ಮೃತಪಟ್ಟಿದ್ದು, ಕರೊನಾಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 52ಕ್ಕೆ ಏರಿದೆ.
ಶನಿವಾರ ದೃಢಪಟ್ಟ 186 ಪ್ರಕರಣಗಳ ಮಾಹಿತಿ ತಾಲೂಕುವಾರು ಇಂತಿದೆ.
ಹುಬ್ಬಳ್ಳಿ ತಾಲೂಕು: ಗುರುನಾಥನಗರ 2ನೇ ಕ್ರಾಸ್ನ 62 ವರ್ಷದ ವೃದ್ಧೆ, ಲೋಹಿಯಾನಗರದ 14 ವರ್ಷದ ಬಾಲಕಿ, ಗದಗ ರಸ್ತೆ ಚಾಲುಕ್ಯ ನಗರದ 66 ವರ್ಷದ ವೃದ್ಧೆ, ಹಳೇಹುಬ್ಬಳ್ಳಿ ಸಹದೇವ ನಗರದ 82ರ ವೃದ್ಧ, ಕೇಶ್ವಾಪುರದ 31ರ ಯುವಕ, ಯಲ್ಲಾಪುರ ಓಣಿಯ 17ರ ಬಾಲಕ, ಮಿಲ್ಲತ್ನಗರದ 25ರ ಯುವಕ , ಕೇಶ್ವಾಪುರದ 32 ವರ್ಷದ ಮಹಿಳೆ, ಶ್ರೀನಿವಾಸ ನಗರದ 67ರ ವೃದ್ಧೆ, ಮಾಧವಪುರದ 25ರ ಯುವತಿ, ಗಣೇಶ ಪೇಟೆಯ 42ರ ಪುರುಷ, ನವನಗರದ 42ರ ಪುರುಷ, ಗಿರಣಿಚಾಳದ 65ರ ವೃದ್ಧೆ, ಆನಂದ ನಗರದ 30ರ ಮಹಿಳೆ, ಕಸಬಾಪೇಟ್ ಪೊಲೀಸ್ ಠಾಣೆಯ 39 ವರ್ಷದ ಮಹಿಳೆ, 25 ವರ್ಷದ ಇಬ್ಬರು ಯುವಕರು, 39ರ ಪುರುಷ, ಗುರುಸಿದ್ಧೇಶ್ವರ ನಗರದ 50ರ ಮಹಿಳೆ, ಘೊಡಕೆ ಪ್ಲಾಟ್ನ 20ರ ಯುವಕ, ವಿದ್ಯಾನಗರದ 24ರ ಯುವತಿ, ಭೈಲಪ್ಪನವರ ನಗರದ 29ರ ಯುವತಿ, ವಿದ್ಯಾನಗರದ 63ರ ವೃದ್ಧ, 29ರ ಯುವಕ, 57ರ ಮಹಿಳೆ, ಕಸಬಾಪೇಟೆಯ 38ರ ಯುವಕ, ಅರವಿಂದ ನಗರದ 60ರ ವೃದ್ಧ, ಉಣಕಲ್ನ 21ರ ಯುವತಿ, ವಿದ್ಯಾನಗರದ 36ರ ಯುವಕ, ಎಸ್.ಎಂ. ಕೃಷ್ಣ ನಗರದ 29ರ ಯುವತಿ, 41ರ ಪುರುಷ, ನೀಲಿಜಿನ್ ರಸ್ತೆಯ 61 ವರ್ಷದ ವೃದ್ಧ, ಶಿವಾಜಿಚೌಕ್ ಪ್ರಶಾಂತ ನಗರದ 34ರ ಯುವಕ, ಗದಗ ರಸ್ತೆಯ 47ರ ಪುರುಷ, ಅಕ್ಷಯ ಪಾರ್ಕ್ನ 42ರ ಪುರುಷ, ನವನಗರದ 39ರ ಪುರುಷ, ವಿದ್ಯಾನಗರದ 29ರ ಯುವಕ, 42ರ ಮಹಿಳೆ, 8 ವರ್ಷದ ಬಾಲಕ, 37ರ ಯುವಕ, 24ರ ಯುವಕ, 27ರ ಯುವಕ, ಪ್ರಿಯದರ್ಶಿನಿ ಕಾಲನಿಯ 27 ವರ್ಷದ ಯವಕ, ಚೆನ್ನಪೇಟೆಯ 51 ವರ್ಷದ ಪುರುಷ, ಶ್ರೀನಿವಾಸ ನಗರದ 37ರ ಯುವಕ, ಇಂದ್ರಪ್ರಸ್ಥ ನಗರದ 65ರ ವೃದ್ಧ, ಆನಂದ ನಗರದ 49 ವರ್ಷದ ಮಹಿಳೆ, ಕಾರವಾರ ರಸ್ತೆ ಮಿಷನ್ ಕಾಂಂಪೌಂಡನ 49ರ ಪುರುಷ, ಅರವಿಂದ ನಗರದ 51ರ ಮಹಿಳೆ, ನವನಗರದ 13 ವರ್ಷದ ಬಾಲಕ, ಕೇಶ್ವಾಪುರದ 62ರ ವೃದ್ಧ, ಗೋಪನಕೊಪ್ಪದ 64ರ ವೃದ್ಧ, ಶೆರೇವಾಡದ 28ರ ಯುವಕ, ಕಿಮ್್ಸ ಆವರಣದ 33, 27, 32 ವರ್ಷದ ಯುವಕರು, ಉಪನಗರ ಪೊಲೀಸ್ ಠಾಣೆಯ 27 ವರ್ಷದ ಯುವಕ, ಶಕ್ತಿ ಕಾಲನಿಯ 7 ವರ್ಷದ ಬಾಲಕ, ಹನುಮಂತ ನಗರದ 23ರ ಯುವಕ, ಸಾಯಿನಗರದ 45 ವರ್ಷದ ಪುರುಷ, ಮಹಿಳಾ ಠಾಣೆಯ 23ರ ಪುರುಷ, ಗುರುನಾಥ ನಗರದ 29ರ ಯುವಕ, ಮಂಟೂರ ರಸ್ತೆಯ 45 ವರ್ಷದ ಮಹಿಳೆ, ತಬೀಬ್ಲ್ಯಾಂಡ್ನ 39ರ ಪುರುಷ, ಅಯೋಧ್ಯಾನಗರದ 31ರ ಮಹಿಳೆ, ಪಂಚಾಕ್ಷರಿ ನಗರದ 45ರ ಮಹಿಳೆ, ಅಂಬೇಡ್ಕರ್ ಕಾಲನಿಯ 36ರ ಯುವಕ, 58ರ ಪುರುಷ, ನ್ಯೂ ವಿನೋಬಾ ನಗರದ ರೈಲ್ವೆ ಕ್ವಾರ್ಟರ್ಸ್ನ 33ರ ಯುವತಿ, ಗಾಂಧಿವಾಡಾದ 29ರ ಯುವಕ, ಗಬ್ಬೂರ ಗಲ್ಲಿಯ 47ರ ಪುರುಷ, ಅಯೋಧ್ಯಾ ನಗರದ 15ರ ಬಾಲಕಿ, 10 ವರ್ಷದ ಬಾಲಕ, ಶಿರಡಿ ನಗರದ 23 ವರ್ಷದ ಯುವಕ, ಸಾಯಿನಗರದ 14ರ ಬಾಲಕಿ, ಕೆಎಂಸಿ ಸಿಬ್ಬಂದಿ 46 ವರ್ಷದ ಪುರುಷ, ಸುಳ್ಳ ರಸ್ತೆಯ 50ರ ಪುರುಷ, ಅಸಾರ ಓಣಿಯ 66ರ ವೃದ್ಧ, ವಿಶಾಲ ನಗರದ 56ರ ಪುರುಷ, ಅಯೋಧ್ಯಾನಗರದ 56ರ ಪುರುಷ, ಘೊಡಕೆ ಪ್ಲಾಟ್ನ 45 ವರ್ಷದ ಮಹಿಳೆ, ಕೌಲ್ಪೇಟೆಯ 53ರ ಮಹಿಳೆ, ನವ ಅಯೋಧ್ಯಾನಗರದ 45ರ ಪುರುಷ, 35ರ ಮಹಿಳೆ, ಬೀರಬಂದ್ ಓಣಿಯ 71ರ ವೃದ್ಧ, ಜಿ.ಪಿ.ಎಸ್. ಹುಬ್ಬಳ್ಳಿಯ 37, 38 ವರ್ಷದ ಪುರುಷರು, ಪ್ರಿಯದರ್ಶಿನಿ ಕಾಲನಿಯ 24ರ ಯುವತಿ, ಮುರಾರ್ಜಿ ನಗರದ 74ರ ವೃದ್ಧ, ನವ ಅಯೋಧ್ಯಾ ನಗರದ 87ರ ವೃದ್ಧೆ, ಶಿರಡಿ ನಗರದ 23, 26 ವರ್ಷದ ಯುವತಿಯರು, ಬಸವೇಶ್ವರ ನಗರದ 10 ವರ್ಷದ ಬಾಲಕ, 24ರ ಯುವತಿ, ಬ್ಯಾಂಕರ್ಸ್ ಕಾಲನಿಯ 40ರ ಪುರುಷ, ಶಕ್ತಿ ಕಾಲನಿಯ 20ರ ಯುವತಿ, ಕೇಶ್ವಾಪುರದ 24 ವರ್ಷದ ಯುವಕ, 59ರ ಪುರುಷ, ರಿಷಿಕಾ ಕಂಪ್ಯೂಟರ್ಸ್ನ 37ರ ಪುರುಷ, ವಿದ್ಯಾನಗರದ 36ರ ಪುರುಷ, ಸಾಯಿನಗರದ 31 ವರ್ಷದ ಯುವಕ, ಉಪನಗರ ಠಾಣೆಯ 27ರ ಯುವಕ, ವಿದ್ಯಾನಗರದ 23ರ ಯುವಕ, ಗೋಪನಕೊಪ್ಪದ 42 ವರ್ಷದ ಪುರುಷ, ಅಕ್ಷಯ ಕಾಲನಿಯ 36ರ ಪುರುಷ, ಕಿಮ್್ಸ ಕ್ಯಾಂಪಸ್ನ 27 ವರ್ಷದ ಯುವಕ, 38 ವರ್ಷದ ಮಹಿಳೆ, ಗಣೇಶಪೇಟೆಯ 61 ವರ್ಷದ ವೃದ್ಧ, ಹುಬ್ಬಳ್ಳಿಯ 24ರ ಯುವತಿ, 59ರ ಪುರುಷ, 65ರ ವೃದ್ಧೆ, 24ರ ಯುವಕ, 17ರ ಬಾಲಕಿ, 43ರ ಪುರುಷ, 48ರ ಪುರುಷ, 58ರ ಪುರುಷ, 26ರಯುವಕ, 3 ವರ್ಷದ ಬಾಲಕ, 65ರ ವೃದ್ಧೆ, 58ರ ಮಹಿಳೆ, 50ರ ಪುರುಷ, 31 ಮತ್ತು 32 ವರ್ಷದ ಯುವಕರಿಗೆ ಸೋಂಕು ತಗುಲಿದೆ.
ಧಾರವಾಡ ತಾಲೂಕು: ಮಣಕಿಲ್ಲಾದ 70 ವರ್ಷದ ವೃದ್ಧೆ, ಹೊಸಯಲ್ಲಾಪುರ ಹೆಂಬ್ಲಿ ಓಣಿಯ 38, 31, 37 ವರ್ಷದ ಮಹಿಳೆಯರು, 14ರ ಬಾಲಕಿ, ಯಾಲಕ್ಕಿ ಶೆಟ್ಟರ ಕಾಲನಿಯ 2 ವರ್ಷದ ಬಾಲಕಿ, ಮಂಗಳವಾರ ಪೇಟೆಯ 60 ಮತ್ತು 62 ವರ್ಷದ ವೃದ್ಧರು, ಎಂ.ಆರ್. ನಗರದ 28ರ ಮಹಿಳೆ, ಬಸದಿ ಓಣಿಯ 20ರ ಯುವತಿ, ಕರ್ನಾಟಕ ವಿವಿ ಆವರಣದ ರ್ವಂಗ್ ವಿಮೆನ್ ಹಾಸ್ಟೆಲ್ನ 25 ವರ್ಷದ ಯುವತಿ, ಬೆನಕನಕಟ್ಟಿ ಗ್ರಾಮದ 45 ವರ್ಷದ ಪುರುಷ, ಯರಿಕೊಪ್ಪ ಗ್ರಾಮದ 50ರ ಪುರುಷ, ಜನ್ನತ ನಗರದ 38ರ ಯುವಕ, ಸಾಧನಕೇರಿ ಶಿರಡಿ ಸಾಯಿಬಾಬಾ ಕಾಲನಿಯ 31, 35 ವರ್ಷದ ಯುವತಿಯರು, 55ರ ಮಹಿಳೆ, 25ರ ಯುವಕ, ಸೋನಾಪುರ 4ನೇ ಕ್ರಾಸ್ನ 33ರ ಯುವಕ, ಮದಿಹಾಳ ಕೊನೇ ನಿಲ್ದಾಣದ 53ರ ಪುರುಷ, ಕೆಲಗೇರಿಯ 40ರ ಪುರುಷ, ಕಾಮನಕಟ್ಟಿ ಮಂಗಳವಾರಪೇಟೆಯ 28ರ ಯುವಕ, ಭೂಸಪ್ಪ ಚೌಕ್ ಉಳ್ಳಾಗಡ್ಡಿ ಓಣಿಯ 31ರ ಮಹಿಳೆ, ಗಾಂಧಿನಗರದ 52ರ ಪುರುಷ, ಇಂದಿರಾನಗರ ಸತ್ತೂರ ಕಾಲನಿಯ 46ರ ಪುರುಷ, ಎಸ್ಡಿಎಂ ಮೆಡಿಕಲ್ ಆಸ್ಪತ್ರೆಯ 25, 33, 26 ವರ್ಷದ ಯುವತಿಯರು, 49 ವರ್ಷದ ಪುರುಷ, ಶಿರಡಿ ನಗರದ 14ರ ಬಾಲಕಿ, 16, 17 ವರ್ಷದ ಬಾಲಕರು, 18, 20, 23, 24, ವರ್ಷದ ಯುವತಿಯರು, 25ರ ಯುವಕ, 37, 41, 43 ವರ್ಷದ ಮಹಿಳೆಯರು, ಸತ್ತೂರ ಕೆಎಚ್ಬಿ ಕಾಲನಿಯ 29ರ ಯುವತಿ, ಟ್ರಾವೆಲ್ ಇನ್ ಹೋಟೆಲ್ ಹಿಂಭಾಗದ 50 ವರ್ಷದ ಪುರುಷ, ಹೆಬ್ಬಳ್ಳಿ ಅಗಸಿಯ 45ರ ಪುರುಷ, ಹಿರೇಮಲ್ಲಿಗವಾಡ ಗ್ರಾಮದ 45ರ ಪುರುಷ, ಹೊಸಯಲ್ಲಾಪುರದ 34ರ ಯುವಕ, ಕಲ್ಲಾಪುರ ಗ್ರಾಮದ 27, 33 ವರ್ಷದ ಯುವಕರು, ರಾಜನಗರ ಶಿವಳ್ಳಿ ಪ್ಲಾಟ್ನ 31ರ ಯುವಕ, ಲಕ್ಷ್ಮೀನಗರ 4ನೇ ಕ್ರಾಸ್ನ 56ರ ಪುರುಷ, ಉಪನಗರ ಠಾಣೆಯ 25 ವರ್ಷದ ಯುವಕ, ತಡಸಿನಕೊಪ್ಪದ 34 ವರ್ಷದ ಯುವಕ, ಧಾರವಾಡದ 24 ವರ್ಷದ ಯುವಕನಿಗೆ ಸೋಂಕು ತಗುಲಿದೆ.
ಅಳ್ನಾವರ ಪಟ್ಟಣ ಹೊನ್ನಾಪುರ ಗ್ರಾಮದ 48 ವರ್ಷದ ಪುರುಷ, ಕಲಘಟಗಿ ತಾಲೂಕು ಹುಲಕೊಪ್ಪದ 30 ವರ್ಷದ ಯುವಕ, ಹೊಲ್ತಿಕೋಟಿ ಗ್ರಾಮದ 21 ವರ್ಷದ ಯುವಕ, ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದ 55 ವರ್ಷದ ಪುರುಷ, ಬೆಟದೂರ ಗ್ರಾಮದ 37 ವರ್ಷದ ಪುರುಷ, ನವಲಗುಂದ ತಾಲೂಕು ಪಡೇಸೂರ ಗ್ರಾಮದ 46 ವರ್ಷದ ಪುರುಷ, ಮೊರಬ ಗ್ರಾಮದ 45ರ ಪುರುಷ ಹಾಗೂ ಹಾವೇರಿಯ ಕಿತ್ತೂರಿನ 30 ವರ್ಷದ ಮಹಿಳೆ, ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕು ನಯಾನಗರ ಗ್ರಾಮದ 20 ವರ್ಷದ ಯುವತಿಗೆ ಕರೊನಾ ವೈರಾಣು ತಗುಲಿರುವುದು ದೃಢಪಟ್ಟಿದೆ.
ಅಬ್ಬಯ್ಯ ಪಿಎಗಳದ್ದು ನೆಗೆಟಿವ್
ಹುಬ್ಬಳ್ಳಿ: ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರ ಎಲ್ಲ ಮೂವರು ಆಪ್ತ ಸಹಾಯಕರ ಗಂಟಲುದ್ರವ ಪರೀಕ್ಷೆ ವರದಿ ನೆಗೆಟಿವ್ ಬಂದಿದೆ.