ಕರೊನಾ ವೈರಸ್ ಶಂಕೆ

H3 Karona 1
Published on

ಹುಬ್ಬಳ್ಳಿ: ಚೀನಾದಿಂದ ಆಗಮಿಸಿದ್ದ ಹುಬ್ಬಳ್ಳಿ ಮೂಲದ ವ್ಯಕ್ತಿಯೊಬ್ಬ ಕರೊನಾ ವೈರಸ್ ಸೋಂಕಿನ ಶಂಕೆ ಹಿನ್ನೆಲೆಯಲ್ಲಿ ಭಾನುವಾರ ಕಿಮ್ಸ್​ಗೆ ದಾಖಲಾಗಿದ್ದು, ವಿಶೇಷ ವಾರ್ಡ್​ನಲ್ಲಿ ತಪಾಸಣೆಗೆ ಒಳಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲೂ ಕರೊನಾ ವೈರಸ್ ಆತಂಕ ಶುರುವಾಗಿದೆ.

ಚೀನಾದಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಕಳೆದ ಜ. 18ರಂದು ವಾಪಸಾಗಿರುವ ಇಲ್ಲಿಯ ಕೇಶ್ವಾಪುರ ಮೂಲದ ಸಂದೀಪ ಕೆಳಸಂಗ (39) ಕಿಮ್ಸ್​ಗೆ ದಾಖಲಾಗಿರುವ ವ್ಯಕ್ತಿ.

ಜ್ವರ, ಕಫ, ಸುಸ್ತು ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಕಿಮ್ಸ್​ಗೆ ದಾಖಲಾಗಿದ್ದಾರೆ.

ಸಂದೀಪ ಚೀನಾದಿಂದ ಬಂದು ಈಗಾಗಲೇ 14 ದಿನವಾಗಿದೆ. ಅಲ್ಲಿಂದ ಬಂದಾಗ ಯಾವುದೇ ಆರೋಗ್ಯ ತೊಂದರೆ ಇರಲಿಲ್ಲ. ಭಾನುವಾರ ಸಂಜೆ ಅಸೌಖ್ಯವೆನಿ ಸಿದ್ದರಿಂದ ಆಸ್ಪತ್ರೆಗೆ ಬಂದು ದಾಖಲಾಗಿದ್ದರಎ. ಚೀನಾದಿಂದ ವಾಪಸಾಗಿ ರುವುದರಿಂದ ಡಿಎಚ್​ಒ ಸಲಹೆ ಮೇರೆಗೆ ರಕ್ತದ ಮಾದರಿಯನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮಂಗಳವಾರ ವರದಿ ಬರಲಿದೆ. ಸದ್ಯ ಅವರ ಆರೋಗ್ಯದ ಬಗ್ಗೆ ಯಾವುದೇ ಆತಂಕ ಪಡುವ ಪರಿಸ್ಥಿತಿ ಇಲ್ಲ. ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ತಿಳಿಸಿದ್ದಾರೆ.

ವಿಶೇಷ ವಾರ್ಡ್ : ಕರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹುಬ್ಬಳ್ಳಿ ಕಿಮ್್ಸ ಹಾಗೂ ಧಾರವಾಡದ ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ವಾರ್ಡ್ ರಚಿಸಲಾಗಿದೆ. ಚಿಕಿತ್ಸೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಯಶವಂತ ಮದೀನಕರ ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net