ಕರೊನಾ ವೈರಸ್ ಗೆ 2 ಬಲಿ

index
Published on

ಬೀದರ್: ಜಿಲ್ಲಾದ್ಯಂತ ಗುರುವಾರ 64 ಜನರಿಗೆ ಕರೊನಾ ಪಾಸಿಟಿವ್ ಬಂದಿದ್ದು, ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 6381ಕ್ಕೆ, ಸಾವಿನ ಸಂಖ್ಯೆ 154ಕ್ಕೇರಿದೆ. ಬಸವಕಲ್ಯಾಣ ತಾಲೂಕಿನ ಮುಚಳಂಬ ಗ್ರಾಮದ 56 ವರ್ಷದ ಪುರುಷ ಹಾಗೂ ತೊಗಲೂರ ಗ್ರಾಮದ 55 ವರ್ಷದ ಮಹಿಳೆ ಸೋಂಕಿನಿಂದ ಮೃತಪಟ್ಟಿದ್ದಾರೆ. ಇವರಿಗೆ ಕರೊನಾ ಜತೆಯಲ್ಲಿ ಇತರೆ ಕಾಯಿಲೆಗಳು ಸಹ ಇದ್ದವು. ಗುರುವಾರ 37 ಸೇರಿ, ಈವರೆಗೆ ಒಟ್ಟು 5709 ಸೋಂಕಿತರು ಚೇತರಿಸಿಕೊಂಡು ಮನೆಗೆ ತೆರಳಿದ್ದಾರೆ. ಇನ್ನೂ 514 ಸಕ್ರಿಯ ಪ್ರಕರಣಗಳಿದ್ದು, ಇದರಲ್ಲಿ 23 ಜನ ಐಸಿಯುನಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net