ಕರೊನಾ ವಾರಿಯರ್​ಗೆ ಭವ್ಯ ಸ್ವಾಗತ

26 Dwd 5new
Published on

ಧಾರವಾಡ: ಕರೊನಾ ಪೀಡಿತರಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಕರ್ತವ್ಯಕ್ಕೆ ಮರಳಿದ ಶಹರ ಠಾಣೆಯ ಮಹಿಳಾ ಮುಖ್ಯ ಪೇದೆಯನ್ನು ಎಸಿಪಿ ಅನುಷಾ ಹಾಗೂ ಸಿಬ್ಬಂದಿ ಭಾನುವಾರ ಸನ್ಮಾನಿಸಿ ಸ್ವಾಗತಿಸಿದರು.

ಹೂವಿನ ಹಾರ ಹಾಕಿ, ಶಾಲು ಹೊದಿಸಿ ಸ್ವಾನಿಸಿದ ನಂತರ ಪುಷ್ಪವೃಷ್ಟಿಯ ಮೂಲಕ ಆತ್ಮೀಯವಾಗಿ ಸ್ವಾಗತಿಸಲಾಯಿತು. ಪ್ರತಿಯೊಬ್ಬರೂ ಕರ್ತವ್ಯದೊಂದಿಗೆ ಪರಸ್ಪರ ಅಂತರ ಕಾಪಾಡುವುದು ಹಾಗೂ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಎಸಿಪಿ ಹೇಳಿದರು.

ಮಹಿಳೆ ಮುಖ್ಯಪೇದೆಗೆ ಸನ್ಮಾನದ ವೇಳೆ ಶ್ವಾನವೊಂದು ಸ್ಥಳದಲ್ಲಿದ್ದು ಗಮನ ಸೆಳೆಯಿತು. ಪ್ರತಿದಿನ ಠಾಣೆಯ ಆವರಣದಲ್ಲೇ ಇರುವ ಈ ಶ್ವಾನವು ಎಸಿಪಿ ಅನುಷಾರಿಂದ ಸನ್ಮಾನ ನಡೆಯುತ್ತಿದ್ದ ವೇಳೆ ಮಹಿಳಾ ಪೇದಯ ಬಳಿಗೆ ತೆರಳಿ ಪ್ರೀತಿ ತೋರಿಸಿದಂತೆ ಭಾಸವಾಯಿತು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net