ಕರೊನಾ ವಾರಿಯರ್ ಡಾ. ಸಚಿನ್​ಗೆ ಅದ್ದೂರಿ ಸ್ವಾಗತ

H1 Dr Sachin 1
Published on

ಹುಬ್ಬಳ್ಳಿ: ಜಿಲ್ಲೆಯ ಮೊದಲ ಕರೊನಾ ಪೀಡಿತ ವ್ಯಕ್ತಿಗೆ ಚಿಕಿತ್ಸೆ ನೀಡಿ ಗುಣಪಡಿಸುವಲ್ಲಿ ಶ್ರಮಿಸಿದ ತಂಡದಲ್ಲಿ ಒಬ್ಬರಾದ ಡಾ. ಸಚಿನ್ ಹೊಸಕಟ್ಟಿ ಅವರು ಮೊದಲ ಬಾರಿ ಮನೆಗೆ ಆಗಮಿಸಿದ ವೇಳೆ ಶುಕ್ರವಾರ ಕಾಲನಿಯ ಜನರು ಜಾಗಟೆ, ಗಂಟೆ ಬಾರಿಸುವ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು.

ಪಾಸಿಟಿವ್ ವ್ಯಕ್ತಿಯ ಚಿಕಿತ್ಸೆ ಮಾಡಿದ ಹಿನ್ನೆಲೆಯಲ್ಲಿ ಡಾ. ಸಚಿನ್ ತಿಂಗಳುಗಳ ಕಾಲ ಮನೆಗೆ ಆಗಮಿಸಿರಲಿಲ್ಲ. ಕುಟುಂಬ ಸದಸ್ಯರನ್ನು ಭೇಟಿ ಆಗಿರಲಿಲ್ಲ. ಕಿಮ್್ಸ ಆವರಣದ ಗೃಹವೊಂದರಲ್ಲಿ ಉಳಿದುಕೊಂಡಿದ್ದರು. ಕ್ವಾರಂಟೈನ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಶುಕ್ರವಾರ ಇಲ್ಲಿನ ಚಾಣಕ್ಯಪುರಿ ಪ್ರದೇಶದ ಮನೆಗೆ ಆಗಮಿಸಿದರು. ಈ ವೇಳೆ ಕಾಲನಿಯ ಜನರು ಚಪ್ಪಾಳೆ ತಟ್ಟಿ, ಜಾಗಟೆ, ಗಂಟೆ ಬಾರಿಸುವ ಮೂಲಕ ಸಂತಸದಿಂದ ಬರಮಾಡಿಕೊಂಡರು. ‘ಗ್ರೇಟ್ ಜಾಬ್ ಡಾಕ್ಟರ್’ ‘ವೆಲ್​ಕಮ್ ಟು ಯುವರ್ ಹೋಮ್ ಎಂದು ಕೈಬರಹ ಫಲಕ ಪ್ರದರ್ಶಿಸಿದರು.

ಸಹಕರಿಸಿದ ಜಿಲ್ಲಾಡಳಿತ, ಕಿಮ್್ಸ ವೈದ್ಯಕೀಯ ತಂಡ, ಪೊಲೀಸ್ ಇಲಾಖೆ, ಸಾರ್ವಜನಿಕರು ಹಾಗೂ ಸಂತಸದಿಂದ ಬರಮಾಡಿಕೊಂಡ ಕಾಲನಿಯ ಜನರಿಗೆ ಡಾ. ಸಚಿನ್ ಅಭಿನಂದನೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net