

ಧಾರವಾಡ: ಜಿಲ್ಲೆಯಲ್ಲಿ ಗುರುವಾರ 342 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಂದು ದಿನದ ಅತಿಹೆಚ್ಚಿನ ದಾಖಲೆ ಇದಾಗಿದೆ. ಒಟ್ಟು ಕರೊನಾ ಪ್ರಕರಣ ಸಂಖ್ಯೆ 12169ಕ್ಕೆ ಏರಿದೆ.
ಇದುವರೆಗೆ 9237 ಜನ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2586 ಪ್ರಕರಣಗಳು ಸಕ್ರಿಯವಾಗಿವೆ. 74 ಜನ ತುರ್ತು ಚಿಕಿತ್ಸಾ ಘಟಕದಲ್ಲಿ ಉಪಚಾರ ಪಡೆಯುತ್ತಿದ್ದಾರೆ. ಇದುವರೆಗೆ 346 ಜನ ಮೃತಪಟ್ಟಿದ್ದಾರೆ.
ಗುರುವಾರದ ಪ್ರಯೋಗಾಲಯ ವರದಿಯಲ್ಲಿ ಧಾರವಾಡ ಶಹರ ಹಾಗೂ ತಾಲೂಕು ಸೇರಿ 74 ಸ್ಥಳಗಳಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ತಾಲೂಕು ಸೇರಿ 76 ಕಡೆ ಪ್ರಕರಣ ಕಂಡುಬಂದಿದೆ.
ಕಲಘಟಗಿ ತಾಲೂಕಿನ ತಾವರಗೇರಿ, ಬೀರವಳ್ಳಿ, ಬಮ್ಮಿಗಟ್ಟಿ ದೇಸಾಯಿ ಓಣಿ, ತಾಲೂಕು ಆಸ್ಪತ್ರೆ; ನವಲಗುಂದ ತಾಲೂಕಿನ ಹೆಬ್ಬಾಳ, ನಾಗರಹಳ್ಳಿ, ಗುಡಿಸಾಗರ, ಬೆನ್ನೂರು, ತಿರ್ಲಾಪುರ; ಕುಂದಗೋಳ ತಾಲೂಕಿನ ಆರ್ಯಭಟ ಶಾಲೆ ಹತ್ತಿರ, ಹಿರೇಬೂದಿಹಾಳ, ಹರ್ಲಾಪುರ, ಸಂಶಿ, ಕಳಸ, ಕಡಪಟ್ಟಿ; ಅಣ್ಣಿಗೇರಿ ತಾಲೂಕಿನ ಅಂಬಿಗೇರಿ ಕ್ರಾಸ್, ಹೊಸಪೇಟೆಯಲ್ಲಿ ಕರೊನಾ ಸೋಂಕು ಕಾಣಿಸಿದೆ.
ಉತ್ತರ ಕರ್ನಾಟಕದ ಇತರ ಜಿಲ್ಲೆಗಳ 10ಕ್ಕಿಂತ ಹೆಚ್ಚು ಜನರು ಗುರುವಾರ ಧಾರವಾಡ ಆಸ್ಪತ್ರೆಗೆ ದಾಖಲಾಗಿದ್ದಾರೆ.