ಕರೊನಾ ಭೀತಿಯಿಂದ ಯುವಕ ಆತ್ಮಹತ್ಯೆ

Published on

ಉಡುಪಿ: ಕರೊನಾ ಸೋಂಕು ಹೆಚ್ಚುತ್ತಿರುವ ಆತಂಕದಿಂದ ಮಾನಸಿಕವಾಗಿ ನೊಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೃತ ಯುವಕ ಕೆಳಾರ್ಕಳಬೆಟ್ಟು ಶ್ಯಾಮಿಲಿ ಗ್ಯಾಸ್ ಗೋಡೌನ್ ರಸ್ತೆ ನಿವಾಸಿ ಪ್ರಸನ್ನ ಡಿ ಅಲ್ಮೇಡ(26). ಇವರು ಕೆಲ ಸಮಯಗಳ ಹಿಂದೆ ಮಾನಸಿಕ ಖಿನ್ನತೆಗೆ ಒಳಪಟ್ಟಿದ್ದು, ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು. ಯುವಕನ ಅಣ್ಣ ಉದ್ಯೋಗದಲ್ಲಿರುವ ದೆಹಲಿಯಲ್ಲಿ ಕರೊನಾ ಹೆಚ್ಚುತ್ತಿರುವ ಬಗ್ಗೆ ಮಾನಸಿಕವಾಗಿ ನೊಂದದಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಏ.23 ರಂದು ರಾತ್ರಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net