ಹುಬ್ಬಳ್ಳಿ-ಧಾರವಾಡದಲ್ಲಿದ್ದೀರಾ.. ಕರೊನಾ ಭಯವೇ.. ಇಂದೇ ನಿವಾರಿಸಿಕೊಳ್ಳಿ

Deepa Cholan
Published on

ಹುಬ್ಬಳ್ಳಿ: ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕರೊನಾ ವೈರಸ್ ಧಾರವಾಡ ಜಿಲ್ಲೆಯ ಜನರನ್ನೂ ಆತಂಕಕ್ಕೆ ದೂಡಿದೆ. ಈವರೆಗೆ ಶಂಕಿತ ಆರು ಜನರ ಪರೀಕ್ಷೆ ನಡೆಸಲಾಗಿದ್ದು, ನಾಲ್ವರ ವರದಿ ನೆಗೆಟಿವ್ ಬಂದಿದೆ. ಇಬ್ಬರ ವರದಿ ಇನ್ನೂ ಬರಬೇಕಿದೆ. ಯಾವುದೇ ಪಾಸಿಟಿವ್ ವರದಿ ಬಂದಿಲ್ಲವಾದರೂ ಜನರಲ್ಲಿನ ಭಯ, ಆತಂಕ ಮಾತ್ರ ಅಧಿಕವಾಗಿದೆ.

ಯಾರಿಗಾದರೂ ಕೆಮ್ಮು, ಸೀನು ಬಂದರೂ ಜನ ಭಯ ಬೀಳುವಂತಾಗಿದೆ. ಅಲ್ಲಿ ಯಾರಿಗೋ ಸೋಂಕು ತಗುಲಿದೆ, ಇಲ್ಲಿ ಇನ್ಯಾರನ್ನೋ ಆಸ್ಪತ್ರೆಗೆ ಕರೆದುಕೊಂಡು ಹೋದರು, ಅವರಿಗೆ ಹಾಗಾಗಿದೆ, ಹೀಗಾಗಿದೆ… ಎಂದು ಗಾಳಿ ಸುದ್ದಿಗಳೇ ಹರಿದಾಡುತ್ತಿವೆ.

ಹಾಗಿದ್ದರೆ, ಯಾವುದೂ ಸರಿ, ಯಾವುದು ತಪ್ಪು. ಧಾರವಾಡ ಜಿಲ್ಲೆಯ ಜನ ಸುರಕ್ಷಿತರೆ? ಕರೊನಾ ಸೋಂಕು ಇದೆ ಎಂದು ಹೇಗೆ ಗೊತ್ತಾಗುತ್ತದೆ. ಜನ ಯಾವೆಲ್ಲ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಕರೊನಾ ಸೋಂಕು ನಿಗ್ರಹಕ್ಕೆ ಜಿಲ್ಲಾಡಳಿತ ಕೈಗೊಂಡ ಕ್ರಮಗಳೇನು… ಏನೆಲ್ಲಾ ಮುಂಜಾಗ್ರತೆ ವಹಿಸಲಾಗಿದೆ. ಚಿಕಿತ್ಸಾ ವ್ಯವಸ್ಥೆಗಳೇನು…?

ಇತ್ಯಾದಿ ಪ್ರಶ್ನೆ, ಆತಂಕಗಳಿಗೆ ಸ್ವತಃ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಉತ್ತರ ನೀಡಲಿದ್ದಾರೆ. ಅಷ್ಟೇ ಅಲ್ಲ ಜಿಲ್ಲಾಧಿಕಾರಿಯೊಂದಿಗೆ ತಜ್ಞ ವೈದ್ಯರ ತಂಡ ಕೂಡ ಇರಲಿದ್ದು, ಕರೊನಾ ಕುರಿತ ನಿಮ್ಮ ಯಾವುದೇ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಲಿದ್ದಾರೆ. ಹಾಗಿದ್ದರೆ, ಯಾವುದೇ ಗಾಳಿ ಸುದ್ದಿಗಳಿಗೆ ಮಹತ್ವ ಕೊಡದೇ ನೇರವಾಗಿ ನಿಮ್ಮ ಪ್ರಶ್ನೆಗಳನ್ನು ಕೇಳಿ ಉತ್ತರ ಕಂಡುಕೊಳ್ಳಿ. ಮಾ. 21ರಂದು ಬೆಳಗ್ಗೆ 11.30ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಹುಬ್ಬಳ್ಳಿ ವಿಜಯವಾಣಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್ ಹಾಗೂ ತಜ್ಞ ವೈದ್ಯರ ತಂಡ ಇರಲಿದ್ದು, ದೂರವಾಣಿ ಸಂಖ್ಯೆ 08362250931 / 932 ಗೆ ಕರೆ ಮಾಡಿ ಉತ್ತರ ಪಡೆಯಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net