ಕರೊನಾ ಪ್ರಕರಣದಲ್ಲಿ ತುಸು ಇಳಿಕೆ

carona logo
Published on

ಧಾರವಾಡ: ಜಿಲ್ಲೆಯಲ್ಲಿ ಸೋಮವಾರ 117 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 9 ಜನ ಮೃತಪಟ್ಟಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 14,534ಕ್ಕೇರಿದ್ದು, ಈವರೆಗೆ 11972 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2131ಪ್ರಕರಣಗಳು ಸಕ್ರಿಯವಾಗಿವೆ. 67 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 431 ಜನ ಮೃತಪಟ್ಟಿದ್ದಾರೆ.

ಸೋಮವಾರ ಪ್ರಕಟವಾದ ಪ್ರಯೋಗಾಲಯ ವರದಿಯಲ್ಲಿ ಧಾರವಾಡ ನಗರ ಹಾಗೂ ಗ್ರಾಮೀಣ ಸೇರಿ 25 ಪ್ರದೇಶಗಳಲ್ಲಿ ಪ್ರಕರಣಗಳು ಪತ್ತೆಯಾಗಿದ್ದರೆ, ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ಸೇರಿ ಅಂದಾಜು 40 ಪ್ರದೇಶಗಳಲ್ಲಿ ಪ್ರಕರಣಗಳು ಕಂಡುಬಂದಿವೆ.

ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ, ಅಗಡಿ ಸರ್ಕಾರಿ ಶಾಲೆ ಹತ್ತಿರ, ಎಪಿಎಂಸಿ, ಗಳಗಿ ಹುಲಕೊಪ್ಪ; ನವಲಗುಂದದ ತಿರ್ಲಾಪುರ, ಯಮನೂರ, ನವಲಗುಂದ ಓಣಿ, ನಾವಳ್ಳಿ ಗುಡಿ ಓಣಿ; ಕುಂದಗೋಳದ ಹಿರೇಗುಂಜಳ, ಸಂಶಿ, ಗುಡಗೇರಿ ಪೊಲೀಸ್ ಠಾಣೆ ಹತ್ತಿರ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಅನ್ಯ ಜಿಲ್ಲೆಗಳಾದ ಗದಗ ಗಂಗಿಮಡ್ಡಿ ರಸ್ತೆ ತಾಜನಗರ, ಉತ್ತರ ಕನ್ನಡದ ಹಳಿಯಾಳ ಅಣೆಗುಂದಿ ಪ್ಲಾಟ್, ದಾಂಡೇಲಿಯ ಸೋಂಕಿತರು ಧಾರವಾಡ ಜಿಲ್ಲೆಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net