

ಧಾರವಾಡ: ಜಿಲ್ಲೆಯಲ್ಲಿ ಭಾನುವಾರ 300 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 11035ಕ್ಕೆ ಏರಿದೆ. ಇದುವರೆಗೆ 8381 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2338 ಪ್ರಕರಣಗಳು ಸಕ್ರಿಯವಾಗಿವೆ.
74 ಜನ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೀರ್ಘಾವಧಿಯಿಂದ ಅನ್ಯ ಕಾಯಿಲೆ ಇರುವವರು, ಶ್ವಾಸಕೋಶ ಸಂಬಂಧಿ ತೊಂದರೆಗಳಿಂದ ಬಳಲುತ್ತಿದ್ದು ಕರೊನಾ ಪೀಡಿತರಾದವರೆ ಹೆಚ್ಚಿನ ಸಂಖ್ಯೆಯಲ್ಲಿ ತುರ್ತು ನಿಗಾ ಘಟಕಕ್ಕೆ ದಾಖಲಿಸಲ್ಪಟ್ಟಿದ್ದಾರೆ.
ಮತ್ತೆ 9 ಜನರು ಕರೊನಾದಿಂದ ಮೃತಪಟ್ಟಿದ್ದಾರೆ. ಇದರಿಂದಾಗಿ, ಚೀನಿ ವೈರಸ್ನಿಂದ ಸಾವಿಗೀಡಾದವರ ಒಟ್ಟು ಸಂಖ್ಯೆ 316ಕ್ಕೆ ಜಿಗಿದಿದೆ.
ಭಾನುವಾರದ ಪ್ರಯೋಗಾಲಯ ವರದಿಯಲ್ಲಿ ಧಾರವಾಡ ತಾಲೂಕು ಹುಬ್ಬಳ್ಳಿಯನ್ನು ಮೀರಿಸಿದೆ. ಧಾರವಾಡ ನಗರ ಮತ್ತು ಗ್ರಾಮಾಂತರ ಸೇರಿ 73 ಪ್ರದೇಶಗಳಲ್ಲಿ ಕರೊನಾ ಪ್ರಕರಣಗಳು ಕಂಡುಬಂದಿವೆ. ಹುಬ್ಬಳ್ಳಿ ಶಹರ ಮತ್ತು ಗ್ರಾಮೀಣ ತಾಲೂಕು ಸೇರಿ 66 ಕಡೆಗಳಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ.
ಕಲಘಟಗಿ ತಾಲೂಕಿನ ಜಮ್ಯಾಳ ಗ್ರಾಮ, ಹುಣಸಿಕಟ್ಟಿ, ಮಾಚಾಪುರ, ಹಿರೇಹೊನ್ನಳ್ಳಿ, ಭೋಗೆನಾಗರಕೊಪ್ಪ, ದುಮ್ಮವಾಡ ಹೊಸೂರ ಪ್ಲಾಟ್, ತಾವರಗೇರಿ, ಹುಲ್ಲಂಬಿ; ನವಲಗುಂದ ತಾಲೂಕಿನ ಅರೇಕುರಹಟ್ಟಿ ಮಾರುತಿ ಗುಡಿ, ತುಪ್ಪದ ಕುರಹಟ್ಟಿ, ಗುಮ್ಮಗೋಳ, ಶಲವಡಿ, ಕುಂದಗೋಳ ತಾಲೂಕಿನ ಸಂಶಿ, ಯರೇಬೂದಿಹಾಳ ಗ್ರಾಮದ ಅಮ್ಮಿನಬಾವಿ ಓಣಿ, ರೆಡಿಗೇರ ಓಣಿ, ಬೆಟದೂರ, ಶಿರಗುಪ್ಪಿ ಬಸವೇಶ್ವರ ನಗರ, ನಿಲಗುಂದ, ಕೊಂಗವಾಡ, ಬೆನಕನಹಳ್ಳಿ, ಬಸಾಪುರ ಹನುಮಂತ ದೇವಸ್ಥಾನ ಬಳಿ, ರೊಟ್ಟಿಗವಾಡ ವೀರಭದ್ರೇಶ್ವರ ಗುಡಿ ಹತ್ತಿರ, ಶಿವಾಜಿ ನಗರ; ಅಣ್ಣಿಗೇರಿ ತಾಲೂಕಿನ ಅಣ್ಣಿಗೇರಿ ಅಗಸಿ ಓಣಿ, ದೇಶಪಾಂಡೆ ನಗರ, ಕೇರಿ ಓಣಿ ಹಾಗೂ ಅಳ್ನಾವರದ ಕೋಗಿಲಗೇರಿಯಲ್ಲಿ ಕರೊನಾ ಸೋಂಕಿತರು ಕಂಡುಬಂದಿದ್ದಾರೆ.
ಅನ್ಯ ಜಿಲ್ಲೆಗಳ 10-15 ಜನರು ಧಾರವಾಡ ಜಿಲ್ಲೆಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
EndFragment