ಕರೊನಾ ದರ್ಬಾರ್ ನೂರರ ಮೇಲೆಯೇ!

carona logo
Published on

ಧಾರವಾಡ: ಜಿಲ್ಲೆಯಲ್ಲಿ ಬುಧವಾರ 175 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಪೀಡಿತರ ಸಂಖ್ಯೆ 3,728ಕ್ಕೆ ಏರಿಕೆಯಾಗಿದೆ. ಇದುವರೆಗೆ 1,654 ಜನ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1,958 ಪ್ರಕರಣಗಳು ಸಕ್ರಿಯವಾಗಿದ್ದು, 40 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 116 ಜನ ಮೃತಪಟ್ಟಿದ್ದಾರೆ.

ಪ್ರತಿದಿನ ನೂರಕ್ಕಿಂತ ಹೆಚ್ಚು ಜನರಲ್ಲಿ ಸೋಂಕು ಖಚಿತವಾಗುತ್ತಿರುವುದು ಆತಂಕಕಾರಿ ಸಂಗತಿಯೇ ಆಗಿದೆ.

ಬುಧವಾರ ಪತ್ತೆಯಾದ ಪ್ರಕರಣಗಳ ವಿವರ:

ಧಾರವಾಡ ತಾಲೂಕು: ನಾರಾಯಣಪುರ 4ನೇ ಅಡ್ಡರಸ್ತೆ, ಹೊಸಯಲ್ಲಾಪುರ, ಲಕ್ಕಮ್ಮನಹಳ್ಳಿ, ಗಾಂಧಿನಗರ, ಹೊಸ ಓಣಿ, ಮಂಗಳವಾರಪೇಟೆ, ರೈಟರ್ ಗಲ್ಲಿ, ಸಾರಸ್ವತಪುರ, ಮೆಹಬೂಬನಗರ, ರಾಜನಗರ ಸುವರ್ಣ ಪೆಟ್ರೋಲ್ ಬಂಕ್ ಹತ್ತಿರ, ಕುಮಾರೇಶ್ವರನಗರ, ಶ್ರೀರಾಮನಗರ, ಸತ್ತೂರ ವನಸಿರಿನಗರ, ಮಲ್ಲಿಕಾರ್ಜುನ ನಗರ, ಎಂ.ಬಿ. ನಗರ, ಗುಲಗಂಜಿಕೊಪ್ಪ, ಲಕ್ಷ್ಮೀನಗರ, ಆಕಾಶವಾಣಿ, ಮುರುಘಾಮಠ ಬಸವನಗರ, ಬಾರಾ ಇಮಾಮಗಲ್ಲಿ, ಮಾಳಾಪುರ, ಸಪ್ತಾಪುರ, ಸೈದಾಪುರ ಓಣಿ, ಜರ್ಮನ್ ಸರ್ಕಲ್, ಮರಾಠಾ ಕಾಲನಿ, ಕಲಘಟಗಿ ರಸ್ತೆ ಪೊಲೀಸ್ ತರಬೇತಿ ಶಾಲೆ, ಟಾಟಾ ಮಾಕೋಪೋಲೋ, ಗಾಂಧಿಚೌಕ್, ಮೃತ್ಯುಂಜಯನಗರ, ಕಾಮನಕಟ್ಟಿ, ಎಸ್​ಡಿಎಂ ಆಸ್ಪತ್ರೆ, ಕಲ್ಯಾಣನಗರದ ಪವನ ಕಾಲನಿ, ಉಪ್ಪಿನಬೆಟಗೇರಿ, ಯು.ಬಿ. ಹಿಲ್, ರಾಮನಗರ, ಮಂಗಳವಾರಪೇಟ, ಕೇರಿ ಓಣಿ ಸತ್ತೂರ, ಹೆಬ್ಬಳ್ಳಿ ಅಗಸಿ, ಚನ್ನಬಸವೇಶ್ವರ ನಗರ, ಹಾವೇರಿಪೇಟೆ, ಕರಿಯಮ್ಮ ಓಣಿ, ಜಿಲ್ಲಾ ಆಸ್ಪತ್ರೆ ಹತ್ತಿರದ ಕರ್ನಾಟಕ ಶಾಲೆ, ಶ್ರೀರಾಮನಗರ ಜಾಧವ ಕಾಲನಿ, ಪುಡಲಕಟ್ಟಿ ಗ್ರಾಮದ ಹೂಗಾರ ಓಣಿ, ಗಾಂಧಿನಗರ, ಮದಿಹಾಳ, ನವಲೂರ, ಮುಧೋಳಕರ ಕಾಂಪೌಂಡ್.

ಹುಬ್ಬಳ್ಳಿ ತಾಲೂಕು: ಗೋಕುಲ ರಸ್ತೆ ಭಾಸ್ಕರ ಭವನ, ಲೂತಿಮಠ ಲೇಔಟ್, ಮಾರುತಿನಗರ ಬಿಡ್ನಾಳ, ಅಯೋಧ್ಯಾನಗರ, ಶಾಂತಿನಗರ, ಇಂದ್ರಪ್ರಸ್ಥ ನಗರ, ಅಶೋಕ ಆಸ್ಪತ್ರೆ, ಲೋಹಿಯಾನಗರ, ನವನಗರ, ಆನಂದನಗರ, ಉತ್ತರ ಮತ್ತು ದಕ್ಷಿಣ ವಲಯದ ಸಂಚಾರಿ ಪೊಲೀಸ್ ಠಾಣೆ, ತಬೀಬಲ್ಯಾಂಡ್, ಕಿಮ್್ಸ ಆಸ್ಪತ್ರೆ, ಸಿದ್ಧಾರೂಢ ಮಠ ಹತ್ತಿರ, ಮಂಟೂರು ರಸ್ತೆ, ಗೋಪನಕೊಪ್ಪ ಶಾಂತಿನಗರ ಸೋಡಾ ಫ್ಯಾಕ್ಟರಿ, ಈಶ್ವರನಗರ, ಉದಯನಗರ, ನೇಕಾರನಗರ, ಗೋಕುಲ ರಸ್ತೆಯ ರುದ್ರಗಂಗಾ ಲೇಔಟ್, ವೆಂಕಟೇಶ್ವರನಗರ, ಕೇಶ್ವಾಪುರ ಬೆಳವಂಕಿ ಕಾಲನಿ, ನ್ಯೂ ಬಾದಾಮಿನಗರ, ಆಜಾದ ಕಾಲನಿ, ಮಧುರಾ ಕಾಲನಿ, ಸುಳ್ಳ ಗ್ರಾಮ, ಚಾಲುಕ್ಯನಗರ, ಆದರ್ಶನಗರ, ವಿಶ್ವೇಶ್ವರ ನಗರ ರೋಟರಿ ಶಾಲೆ ಹತ್ತಿರ, ಗುಡಿಹಾಳ ರಸ್ತೆ, ಭೈರಿದೇವರಕೊಪ್ಪ ಶಾಂತಿನಿಕೇತನ, ವಿದ್ಯಾನಗರದ ಕೆ.ಎಚ್. ಪಾಟೀಲ ಕಾಲೇಜ್ ಹತ್ತಿರ, ದೇಶಪಾಂಡೆ ನಗರ, ಕಿಲ್ಲೇದ ಓಣಿ, ಮಂಜುನಾಥ ನಗರ, ಶೆರೇವಾಡ ಗ್ರಾಮ, ರೌಣಕ್​ಪುರ ಕಾಲನಿ.

* ಅಳ್ನಾವರ ಪಟ್ಟಣದ ಬಸವೇಶ್ವರ ಮಾರ್ಕೆಟ್, ಕಲಘಟಗಿ ತಾಲೂಕಿನ ಬೆಲವಂತರ ಗ್ರಾಮ, ಕುಂದಗೋಳ ತಾಲೂಕಿನ ಶಿರೂರ ಗ್ರಾಮ, ನವಲಗುಂದ ಪಟ್ಟಣದ ರಾಮಲಿಂಗನವರ ಓಣಿ ಹಾಗೂ ಹಾವೇರಿ ಜಿಲ್ಲಾ ಆಸ್ಪತ್ರೆ, ಸವದತ್ತಿ ತಾಲೂಕಿನ ಮುನವಳ್ಳಿ, ಬೈಲಹೊಂಗಲ ತಾಲೂಕು ಬೆಳವಡಿ ಗ್ರಾಮಗಳಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗಿವೆ.

ಮಾರುಕಟ್ಟೆ ಪ್ರದೇಶಗಳಲ್ಲಿ ರ್ಯಾಪಿಡ್ ಟೆಸ್ಟ್ ಇಂದಿನಿಂದ

ಧಾರವಾಡ: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿರುವುದರಿಂದ ಅವಳಿ ನಗರದ ಹೆಚ್ಚು ಜನಸಂದಣಿ ಇರುವ ಮಾರ್ಕೆಟ್ ಪ್ರದೇಶಗಳಲ್ಲಿ ಜು. 30ರಿಂದ ರ್ಯಾಪಿಡ್ ಆಂಟಿಜನ್ ಟೆಸ್ಟ್ ಅನ್ನು ಮಿಷನ್ ಮೋಡ್​ದಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಕಣ್ಗಾವಲು ಮತ್ತು ಸಾರ್ವಜನಿಕ ಆರೋಗ್ಯ ಸುರಕ್ಷತೆ ಕ್ರಮಗಳ ಅನುಷ್ಠಾನ ಕುರಿತ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕರೊನಾ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ವಿವಿಧ ಇಲಾಖೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಆದಾಗ್ಯೂ ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಇವುಗಳ ಪಾಲನೆ ಆಗದಿರುವುದು ಕಂಡು ಬರುತ್ತಿದೆ. ಹೀಗಾಗಿ ಅವಳಿನಗರದಲ್ಲಿ ಕರೊನಾ ಸೋಂಕಿತರು ಹೆಚ್ಚು ಕಂಡು ಬರುವ ಮತ್ತು ಹೆಚ್ಚು ಜನಸಂದಣಿ ಸೇರುವ ಪ್ರದೇಶಗಳಲ್ಲಿ ಟೆಸ್ಟ್ ಆರಂಭಿಸಲಾಗುತ್ತಿದೆ ಎಂದರು.

ಆರಂಭದಲ್ಲಿ ಹುಬ್ಬಳ್ಳಿಯ ದುರ್ಗದಬೈಲ್, ಕಸಬಾಪೇಟೆ, ಹಳೇಹುಬ್ಬಳ್ಳಿ ಮಾರುಕಟ್ಟೆ, ಆನಂದನಗರ, ಹೊಸ ಆನಂದನಗರ, ಬಂಕಾಪುರ ಚೌಕ, ಜನತಾ ಬಜಾರ್, ಗಣೇಶಪೇಟೆ ಮಾರ್ಕೆಟ್, ಹರ್ಷಾ ಕಾಂಪ್ಲೆಕ್ಸ್, ಎಂಪಿಎಂಸಿ ಹಾಗೂ ಧಾರವಾಡದ ಸುಭಾಷ ರಸ್ತೆ, ಟಿಕಾರೆ ರಸ್ತೆ, ಸೂಪರ್ ಮಾರುಕಟ್ಟೆ ಮತ್ತು ಎಪಿಎಂಸಿ ಪ್ರದೇಶಗಳಲ್ಲಿ ಟೆಸ್ಟ್ ಮಾಡಲಾಗುವುದು. ಈ ಪ್ರದೇಶಗಳಿಗೆ ಆಗಮಿಸುವ ಜನರು, ಅಂಗಡಿ ಮಾಲೀಕರು, ಅಂಗಡಿಯ ಕೆಲಸಗಾರರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದರು.

ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪಪೊಲೀಸ್ ಆಯುಕ್ತರಾದ ಕೃಷ್ಣಕಾಂತ, ಆರ್.ಬಿ. ಬಸರಗಿ, ಪಾಲಿಕೆ ಆಯುಕ್ತ ಡಾ. ಸುರೇಶ್ ಇಟ್ನಾಳ, ಎಸಿಪಿ ಅನುಷಾ ಜಿ., ತಹಸೀಲ್ದಾರರು, ವಿವಿಧ ಇಲಾಖೆ ಅಧಿಕಾರಿಗಳು, ಇತರರು ಇದ್ದರು

ಕೋವಿಡ್​ನಿಂದ 7 ಜನ ಸಾವು

ಧಾರವಾಡ: ಕರೊನಾದಿಂದ ಬಳಲುತ್ತಿದ್ದ ಜಿಲ್ಲೆಯ 7 ಜನ ಬುಧವಾರ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ತೀವ್ರ ಉಸಿರಾಟದ ತೊಂದರೆ ಹಾಗೂ ಜ್ವರ, ಕಫ, ಎದೆ ನೋವು ಮತ್ತಿತರ ಲಕ್ಷಣಗಳಿಂದ ಬಳಲುತ್ತಿದ್ದ ಹುಬ್ಬಳ್ಳಿ ನೇಕಾರ ನಗರದ 56 ವರ್ಷದ ಪುರುಷ, ಹುಬ್ಬಳ್ಳಿ ಪಗಡಿ ಓಣಿಯ 75 ವರ್ಷದ ವೃದ್ಧ, ಭೈರಿದೇವರಕೊಪ್ಪದ 68 ವರ್ಷದ ವೃದ್ಧೆ, ಸಿದ್ಧಾರೂಢ ಮಠದ ಬಳಿಯ 26 ವರ್ಷದ ಯುವತಿ, ಸಿದ್ಧನಪೇಟೆಯ 98 ವರ್ಷದ ವೃದ್ಧ, ಧಾರವಾಡ ಮೃತ್ಯುಂಜಯ ನಗರದ 60 ವರ್ಷದ ವೃದ್ಧ ಹಾಗೂ ನಾರಾಯಣಪುರದ 68 ವರ್ಷದ ವೃದ್ಧೆ ಮೃತಪಟ್ಟಿದ್ದಾರೆ. ನಿಯಮಾನುಸಾರ ಪಾರ್ಥಿವ ಶರೀರಗಳ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ತಿಳಿಸಲಾಗಿದೆ.

ಸರ್ಕಾರಿ ಕಚೇರಿಗಳಿಗೆ ಸ್ಯಾನಿಟೈಸೇಷನ್

ಧಾರವಾಡ: ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ದಿನೇ ದಿನೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಸರ್ಕಾರಿ ಕಚೇರಿಗಳಿಗೆ ಸ್ಯಾನಿಟೈಸೇಷನ್ ಕಾರ್ಯ ಚುರುಕುಗೊಂಡಿದೆ.

ನಗರದಲ್ಲಿ ಪ್ರಮುಖವಾಗಿ ಹೆಚ್ಚಿನ ಜನ ಸಂಚಾರವಿರುವ ಜಿಲ್ಲಾಧಿಕಾರಿ ಕಚೇರಿ ಸೇರಿ ವಿವಿಧ ಇಲಾಖೆಗಳ ಕಚೇರಿಗಳನ್ನು ಮಂಗಳವಾರ ಸ್ವಚ್ಛಗೊಳಿಸಿ, ಸೋಡಿಯಂ ಹೈಡ್ರೊಕ್ಲೋರೈಡ್ ದ್ರಾವಣ ಸಿಂಪಡಣೆ ಮಾಡಲಾಯಿತು.

ಕೆಲ ದಿನಗಳ ಹಿಂದೆ ಜಿಲ್ಲಾ ಪಂಚಾಯಿತಿ, ತಹಸೀಲ್ದಾರ್ ಕಚೇರಿ ಸೇರಿ ಕೆಲ ಕಚೇರಿಗಳ ಸಿಬ್ಬಂದಿಗೆ ಕರೊನಾ ಸೋಂಕು ತಗುಲಿದೆ. ಇನ್ನು ಸರ್ಕಾರಿ ಕಚೇರಿಗಳಿಗೆ ವಿವಿಧ ಕೆಲಸಗಳಿಗೆ ನಿತ್ಯ ನೂರಾರು ಜನ ಆಗಮಿಸುವುದರಿಂದ ಕರೊನಾ ಹರಡಬಹುದು ಎಂಬ ಆತಂಕ ನೌಕರರಲ್ಲಿ ಕಾಡುತ್ತಿದೆ. ಈ ಆತಂಕ ದೂರ ಮಾಡಿ ನಿರ್ಭಯದಿಂದ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿ ಎಂಬ ಉದ್ದೇಶದಿಂದ ದ್ರಾವಣ ಸಿಂಪಡಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net