ಕರೊನಾ ತೊಲಗಿಸಲು ಎಲ್ಲರೂ ಒಟ್ಟಾಗಿ

3kabbur1-Web
ಕಬ್ಬೂರ ಪಟ್ಟಣದ ಮಲ್ಲಿಕಾರ್ಜುನ ಭವನದಲ್ಲಿ ಏರ್ಪಡಿಸಿದ್ದ ಅಧಿಕಾರಿಗಳ ಮತ್ತು ಅಂಗನವಾಡಿ,ಆಶಾ ಕಾರ್ಯಕರ್ತರ ಸಭೆಯಲ್ಲಿ ಶಾಸಕ ದುರ್ಯೋಧನ ಐಹೊಳೆ ಅವರು ಪೌರ ಕಾರ್ಮಿಕರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಾಟಲಿ ವಿತರಿಸಿದರು. ಸುರೇಶ ಬೆಲ್ಲದ, ಮಹಾಲಿಂಗ ಹಂಜಿ, ಇತರರು ಇದ್ದರು.
Published on

ಕಬ್ಬೂರ: ದೇಶ ಪಕ್ಷಾತೀತವಾಗಿ ಕರೊನಾ ನಿಯಂತ್ರಣಕ್ಕೆ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಶ್ರಮಿಸುತ್ತಿದ್ದಾರೆ. ಹಾಗಾಗಿ ಎಲ್ಲ ಸಮುದಾಯದ ಜನರು ಸರ್ಕಾರದ ನಿಯಮ ಪಾಲಿಸಬೇಕು ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದ್ದಾರೆ.

ಪಟ್ಟಣದ ಮಲ್ಲಿಕಾರ್ಜುನ ಭವನದಲ್ಲಿ ಏರ್ಪಡಿಸಿದ್ದ ಅಧಿಕಾರಿಗಳು ಮತ್ತು ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಸಮುದಾಯಗಳ ಮುಖಂಡರ ಸಭೆ ಉದ್ದೇಶಿಸಿ ಮಾತನಾಡಿದರು. ಎಲ್ಲರೂ ಒಗ್ಗಟ್ಟಾಗಿ ಕರೊನಾ ಮಹಾಮಾರಿ ವಿರುದ್ಧ ಹೋರಾಟ ನಡೆಸಬೇಕಾಗಿದೆ. ಕಬ್ಬೂರ ಪಟ್ಟಣದ ಸುತ್ತಮುತ್ತಲಿನ ಎಲ್ಲಾ ಗ್ರಾಮಗಳ ಸಮುದಾಯದ ಮುಖಂಡರು ತಮ್ಮ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಪಪಂ ಅಧಿಕಾರಿಗಳು ಪಟ್ಟಣವನ್ನು ಸ್ವಚ್ಛವಾಗಿಡಲಸು ಶ್ರಮಿಸಬೇಕು. ಆಹಾರ ಸಾಮಗ್ರಿಗಳ ಕೊರತೆಯಾಗದಂತೆ ಮತ್ತು ಕೃಷಿ ಉತ್ಪನ್ನ ಬೇರೆ ಕಡೆಗೆ ಸಾಗಿಸುವ ಪಾಸ್ ನೀಡಲು ಸಲಹೆ ನೀಡಿದರು. ಪೌರ ಕಾರ್ಮಿಕರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಾಟಲಿ ನೀಡಿದರು. ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎಂ.ಬಿ.ಭೃಂಗಿಮಠ,ಹಿರಾಶುಗರ್ ನಿರ್ದೇಶಕ ಸುರೇಶ ಬೆಲ್ಲದ, ಮಹಾಲಿಂಗ ಹಂಜಿ, ಗ್ರಾಮ ಲೆಕ್ಕಾಧಿಕಾರಿ ವಿ.ಎಸ್. ಢವಳೇಶ್ವರ, ಬಾಳು ಕುಕನೂರೆ, ಮುಖ್ಯ ವೈದ್ಯಾದಿಕಾರಿ ಎಸ್.ಎಂ.ಕರಗಾಂವಿ, ದಯಾನಂದ ಕೋರೆ, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net