ಕರೊನಾ ತಡೆಗೆ ಮಾಸ್ಕ ಧರಿಸಿ

20.07 hulsoor photo (01)
Published on

ಹುಲಸೂರು: ಕರೊನಾ ನಿಯಂತ್ರಣಕ್ಕೆ ಎಲ್ಲರೂ ಕಡ್ಡಾಯವಾಗಿ ಮಾಸ್ಕ ಧರಿಸಬೇಕು ಎಂದು ಮೇಹಕರ- ತಡೋಳಾದ ಶ್ರೀ ರಾಜೇಶ್ವರ ಶಿವಾಚಾರ್ಯರು ಹೇಳಿದರು. ಭಾಲ್ಕಿ ತಾಲೂಕಿನ ಮೇಹಕರ ಗ್ರಾಮದ ಶ್ರೀಗುರು ವಿರುಪಾಕ್ಷೇಶ್ವರ ಸಂಸ್ಥಾನ ಮಠದಲ್ಲಿ ಸಾಮಾಜಿಕ ಕಾರ್ಯಕರ್ತ ಜ್ಞಾನೇಶ್ವರ ಕಾಂಬಳೆ ಅವರಿಂದ ಮಾಸ್ಕ ಉಚಿತ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕರೊನಾ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿದ್ದು, ಸಾರ್ವಜನಿಕರು ನಿರ್ಲಕ್ಷಿಸದೆ ಮಾಸ್ಕ ಧರಿಸಿ, ಪರಸ್ಪರ ಅಂತರ ಕಾಪಾಡಿಕೊಂಡು ಇರಬೇಕು. ರೋಗದ ಬಗ್ಗೆ ಹೆದರದೆ ಜಾಗೃತಿಯಿಂದ ಇರಬೇಕು ಎಂದು ಹೇಳಿದರು.
ಪಿಎಸ್ಐ ಕಾಶೀನಾಥ ರೋಳಾ, ಪಿಡಿಒ ವಿಷ್ಣುಕಾಂತ ರೆಡ್ಡಿ, ಪತ್ರಕರ್ತ ಮುಕುಂದ ಲಿಂಬಾಳಕರ್, ನಾಗೇಶ ಮೋಳಕೆರೆ, ನಿಲಕಂಠ ಹಿಲಾಲಪೂರೆ, ನರಸಿಂಗ ಇತರರಿದ್ದರು. ಗ್ರಾಮದ ವಿವಿಧ ಬಡಾವಣೆಯಲ್ಲಿ ಸಂಚರಿಸಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮಾಸ್ಕ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net