ಕರೊನಾ ತಡೆಗೆ ಬುಟ್ಟಿ ಜಾತ್ರೆ

Nandi nagur
Published on

ಔರಾದ್: ಕರೊನಾ ನಿಯಂತ್ರಣ ಹಾಗೂ ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸಿ ತಾಲೂಕಿನ ನಂದಿ ನಾಗೂರ ಗ್ರಾಮದ ಜನತೆ ಮಂಗಳವಾರ ಬುಟ್ಟಿ ಜಾತ್ರೆ ಮಾಡಿದರು. ಊರ ಹೊರಗಿನ ನಂದಿ ಕೆರೆ ದೇವಸ್ಥಾನಕ್ಕೆ ಹೋಗಿ ಪೂಜೆ ನೆರವೇರಿಸಿ ಬುಟ್ಟಿ ಜಾತ್ರೆ ಆಚರಿಸಿದರು. ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಹೋಳಿಗೆ, ಕಡುಬು, ಚಪಾತಿ, ಮೋಸರನ್ನ, ಬದನೆಕಾಯಿ ಪಲ್ಯ, ಫುಂಡಿ ಪಲ್ಯ, ಅನ್ನ, ಚಿತ್ರನ್ನ ಸೇರಿ ವಿವಿಧ ಖಾದ್ಯ ತಯಾರಿಸಿಕೊಂಡು ಬಂದಿದ್ದರು. ಗ್ರಾಮದೇವರಾದ ನಂದಿಕೆರೆ ಬಸವಣ್ಣನವರಿಗೆ ನೈವೇದ್ಯ ಅಪರ್ಿಸಿ ಎಲ್ಲರೂ ಸೇರಿ ದೇಶಿ ಊಟ ಸವಿದರು.
ಮಹಿಳೆಯರು ತಲೆಯ ಮೇಲೆ ತುಂಬಿದ ನೀರಿನ ಕೊಡಗಳ ಕಳಸಗಳನ್ನು ಹಾಗೂ ಪುರುಷರು ತಲೆಯ ಮೇಲೆ ಖಾದ್ಯಗಳ ಬುಟ್ಟಿ ಹೊತ್ತುಕೊಂಡು ಭಾಜಾ, ಭಜಂತ್ರಿ ಹಾಗೂ ಭಜನೆ ಮಾಡುತ್ತಾ ಬರಿಗಾಲಿನಲ್ಲಿ ದೇವಸ್ಥಾನದವರೆಗೆ ನಡೆದು ಬಂದರು.
ಪ್ರಮುಖರಾದ ಶೋಭಾವತಿ, ಬಸಮ್ಮ, ಅಕ್ಕಮ್ಮ, ಚೆನ್ನಮ್ಮ, ಕಲ್ಲಪ್ಪ ಪಾಂಚಾಳ, ಸಂಗಮೇಶ ಕೆಂಚಾ, ಸಂಗಮೇಶ ಕೊಡಗೆ, ಶಿವಕುಮಾರ ಮಡಿವಾಳ, ಚಂದ್ರಪ್ಪ ಕೊಡಗೆ, ಅಣ್ಣೆಪ್ಪ, ನಾಗಶೆಟ್ಟಿ ಕೊಡಗೆ, ರಾಜಕುಮಾರ ಕೆಂಚಾ ಸೇರಿ ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net