ಕರೊನಾ ಚಿಕಿತ್ಸೆ ನೀಡಲು ಸಹಕರಿಸದ ವೈದ್ಯರ ವಿರುದ್ಧ ಕ್ರಮ

B SHARAT DC Photo
Published on

ಕಲಬುರಗಿ: ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿರುವುದಲ್ಲದೇ ಚಿಕಿತ್ಸೆ ನೀಡದಂತೆ ಇತರ ವೈದ್ಯರಿಗೂ ಪ್ರಚೋದಿಸುತ್ತಿರುವ ವೈದ್ಯರನ್ನು ದೇಶದ್ರೋಹಿಗಳೆಂದು ಪರಿಗಣಿಸಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಕೊಳ್ಳುವುದಾಗಿ ಜಿಲ್ಲಾಧಿಕಾರಿ ಬಿ. ಶರತ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರದ ಎಂಆರ್ ಎಂ ಸಿ ಮೆಡಿಕಲ್ ಕಾಲೇಜಿನ ಡೀನ್ ಅವರಿಗೆ ಈ ಕುರಿತು ವಿವರವಾದ ಪತ್ರ ಬರೆದಿರುವ ಅವರು, ತಮ್ಮ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕೆಲವು ವೈದ್ಯರು ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ಸೋಂಕಿತರಿಗೆ ಚಿಕಿತ್ಸೆ ನೀಡದಂತೆ ಇನ್ನೂ ಕೆಲವು ವೈದ್ಯರಿಗೆ ಉತ್ತೇಜನ ನೀಡುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಒಂದು ವೇಳೆ ಈ ಅಮಾನವೀಯತೆ ಮುಂದುವರಿದರೆ ಅಂತಹ ವೈದ್ಯರ ವಿರುದ್ಧ ದೇಶದ್ರೋಹದ ಆಪಾದನೆ ಹೊರಿಸಿ ಕಠಿಣ ಕ್ರಮ ಕೈಕೊಳ್ಳಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ದೇಶದಲ್ಲಿ ಅನೇಕ ವೈದ್ಯರು ಮತ್ತು ನರ್ಸಗಳು ಹಗಲಿರುಳು ಎನ್ನದೇ ತಮ್ಮ ಜೀವದ ಹಂಗನ್ನೂ ಸಹ ಲೆಕ್ಕಿಸದೇ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ದೇಶದಲ್ಲಿಯೇ ಮೊದಲ ವ್ಯಕ್ತಿ ಮೃತಪಟ್ಟಿದ್ದು ನಮ್ಮ ಜಿಲ್ಲೆಯವನು, ಜಿಲ್ಲೆಯಲ್ಲಿ ಕೊರೋನಾ ತುತರ್ು ಪರಿಸ್ಥಿತಿ ಇದೆ, ಅದಕ್ಕಾಗಿ ಎಲ್ಲ ವೈದ್ಯರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಕೋರಿದ್ದಾರೆ.

ಧಾರ್ಮಿಕ ಸಭೆ, ಉರುಸ್-ಜಾತ್ರೆ ನಡೆಸಿದರೆ ಕಠಿಣ ಕ್ರಮ

ಕಲಬುರಗಿ: ಕರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿ ಎಲ್ಲ ಧಾಮರ್ಿಕ ಮತ್ತು ಪ್ರಾರ್ಥನಾ ಸ್ಥಳಗಳನ್ನು ಮುಚ್ಚುವಂತೆ ಹಾಗೂ ಜಾತ್ರೆ, ಧಾಮರ್ಿಕ ಸಭೆ, ಧಾರ್ಮಿಕ ಉರುಸ್ ಕೈಗೊಳ್ಳದಂತೆ ಆದೇಶಿಸಿದ್ದರೂ ಕೆಲ ಗ್ರಾಮಗಳಲ್ಲಿನ ಜನರು ರಾತ್ರಿ ವೇಳೆಯಲ್ಲಿ ಜಾತ್ರೆ, ಧಾರ್ಮಿಕ ಉರುಸ್, ಧಾರ್ಮಿಕ ಸಭೆ ನಡೆಸುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ರಾಜ್ಯದಲ್ಲಿ ಸಿಆರ್ಪಿಎಫ್. ಕಾಯ್ದೆ 1973ರ ಕಲಂ 144 ಜಾರಿಯಲ್ಲಿರುವುದರಿಂದ ಸಾರ್ವಜನಿಕರು ಗಂಪು-ಗುಂಪಾಗಿ ಸೇರಿ ಧಾರ್ಮಿಕ ಸಭೆ, ಉರುಸ್ ಹಾಗೂ ಜಾತ್ರೆ ಕೈಗೊಳ್ಳುವುದು ಕಂಡು ಬಂದಲ್ಲಿ ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net