ಕರೊನಾ ಚಿಂತೆಯಿಲ್ಲದೆ ಸಂತೆ ಮಾಡಿದ ಜನರು

31 lxr 1
Published on

ಲಕ್ಷ್ಮೇಶ್ವರ: ಜನಸಂದಣಿ ತಡೆಗಟ್ಟುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಪ್ರತಿ ಶುಕ್ರವಾರ ನಡೆಯುವ ಸಂತೆಯನ್ನು ಸರ್ಕಾರದ ಆದೇಶದ ಪ್ರಕಾರ ಪಟ್ಟಣದ ಉಮಾ ವಿದ್ಯಾಲಯ ಹೈಸ್ಕೂಲ್ ಮೈದಾನದಲ್ಲಿ ನಡೆಸಲಾಯಿತು.

ದಿನಸಿ ಮತ್ತು ಸ್ವಂತ ಅಂಗಡಿ ಹೊಂದಿದ ವ್ಯಾಪಾರಸ್ಥರನ್ನು ಹೊರತುಪಡಿಸಿ ತರಕಾರಿ, ಹೂವು, ಹಣ್ಣು ಇತರೆ ಜೀವನಾವಶ್ಯಕ ವಸ್ತುಗಳ ಮಾರಾಟದ ಸಂತೆಯನ್ನು ಮೈದಾನಕ್ಕೆ ಸ್ಥಳಾಂತರ ಮಾಡಲಾಗಿತ್ತು. ಸಂತೆಗೆ ವಿಶಾಲವಾದ ಮೈದಾನವಿದ್ದರೂ ಪೊಲೀಸ್ ಠಾಣೆ ಎದುರಿನ ಶಿಗ್ಲಿ ರಸ್ತೆಯುದ್ದಕ್ಕೂ ಎರಡೂ ಬದಿ ವ್ಯಾಪಾರ ನಡೆಸಿದ್ದರಿಂದ ಜನಸಂದಣಿಯಿಂದಾಗಿ ಸಂಚಾರಕ್ಕೆ ಅಡಚಣೆಯಾಯಿತು. ಸಣ್ಣ-ಪುಟ್ಟ ವ್ಯಾಪಾರಿಗಳು ದಾರಿಯಲ್ಲಿಯೇ ನಿಂತು ವ್ಯಾಪಾರ ಮಾಡುತ್ತಿದ್ದರು.

ಸಂತೆಯಲ್ಲಿ ಬಹುತೇಕ ವ್ಯಾಪಾರಸ್ಥರು, ಜನರ ನಡುವೆ ಸಾಮಾಜಿಕ ಅಂತರ ಇರಲಿಲ್ಲ. ಮಾಸ್ಕ್ ಧರಿಸಿರಲಿಲ್ಲ ಕೆಲವರು ಕಾಟಾಚಾರಕ್ಕೆಂಬಂತೆ ಯಾವುದೋ ಬಟ್ಟೆಯನ್ನು ಕುತ್ತಿಗೆಗೆ ಕಟ್ಟಿಕೊಂಡಿದ್ದು ಕಂಡು ಬಂದಿತು.

ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದನ್ನು ನಿಯಂತ್ರಣ ಮಾಡಲು ಸರ್ಕಾರದ ಆದೇಶದಂತೆ ಸಂತೆಯನ್ನು ಮೈದಾನಕ್ಕೆ ಸ್ಥಳಾಂತರ ಮಾಡಲಾಗಿದೆ. ಮೊದಲ ದಿನವಾದ್ದರಿಂದ ಒಂದಿಷ್ಟು ಅಸ್ತವ್ಯಸ್ತವಾಗಿರಬಹುದು. ರಸ್ತೆ ಬದಿ ಹಚ್ಚಿರುವ ವ್ಯಾಪಾರಿಗಳಿಗೆ ತಿಳಿ ಹೇಳಿ ಮಧ್ಯಾಹ್ನದ ನಂತರ ಮೈದಾನದಲ್ಲಿಯೇ ವ್ಯಾಪಾರ ಮಾಡುವಂತೆ ನೋಡಿಕೊಳ್ಳಲಾಗಿದೆ. | ಶಂಕರ ಹುಲ್ಲಮ್ಮನವರ ಮುಖ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net