ಕರೊನಾ ಕಾಟಕ್ಕೆ ಬಸವಳಿದ ಜನ

carona logo
Published on

ಗದಗ: ಜಿಲ್ಲೆಯಲ್ಲಿ ಮಂಗಳವಾರ ಮತ್ತೆ 99 ಜನರಿಗೆ ಕರೊನಾ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1764ಕ್ಕೆ ಏರಿದೆ. ಮಂಗಳವಾರ 53 ಜನರು ಸೇರಿ ಒಟ್ಟು 633 ಜನರು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ವೈರಸ್​ನಿಂದ ಮೃತಪಟ್ಟವರ ಸಂಖ್ಯೆ 40ಕ್ಕೆ ಏರಿದೆ.

ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು:

ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ಹಮಾಲರಪ್ಲಾಟ್, ಸಂಭಾಪುರ ರೋಡ್ ಪೊಲೀಸ್ ಕ್ವಾರ್ಟರ್ಸ್, ಶರಣಬಸವೇಶ್ವರ ಸ್ಕೂಲ್ ಹತ್ತಿರ, ವರಸಿದ್ಧಿ ವಿನಾಯಕ ದೇವಸ್ಥಾನದ ಹತ್ತಿರ, ಕೆ.ಸಿ. ರಾಣಿ ರಸ್ತೆ, ಟ್ಯಾಗೋರ್ ರಸ್ತೆ, ಗೌರಿ ಗುಡಿ ಓಣಿ, ಹೆಲ್ತ್ ಕ್ಯಾಂಪ್, ಎಸ್.ಎಂ.ಕೆ. ನಗರ, ಮಂಜುನಾಥನಗರ, ಬೆಟಗೇರಿ, ವಿವೇಕಾನಂದ ನಗರ ವಾಟರ್ ಟ್ಯಾಂಕ್ ಹತ್ತಿರ, ಶಿವಸಾಯಿನಗರ, ಕುಂಬಾರ ಓಣಿ, ಶಿವಾಜಿನಗರ, ಜೆ.ಟಿ. ಕಾಲೇಜ್ ಹತ್ತಿರ ಕರಡಿ ಅಡ್ಡೆ, ಒಕ್ಕಲಗೇರಿ ಓಣಿ, ರಾಮಮಂದಿರ ಹತ್ತಿರ ಹೆಲ್ತ್ ಕ್ಯಾಂಪ್, ಹುಡ್ಕೋ ಕಾಲನಿ, ಆರ್.ಕೆ. ನಗರ, ದೂಲಿ ಗಲ್ಲಿ, ಬೆಟಗೇರಿ, ಜವಳಿ ಗಲ್ಲಿ, ಕಬಾಡಿ ಓಣಿ. ಗದಗ ತಾಲೂಕಿನ ಬೆಳಹೋಡ, ಮುಳಗುಂದ, ಹುಲಕೋಟಿ, ಬಿಂಕದಕಟ್ಟಿ, ಕಳಸಾಪುರ. ನರಗುಂದ ಪಟ್ಟಣದ ಮೆಣಸಿನಕಾಯಿ ಓಣಿ, ವಿನಾಯಕನಗರ, ಹೊರಕೇರಿ ಓಣಿ, ನರಗುಂದ ತಾಲೂಕಿನ ಹದ್ಲಿ, ಕಲ್ಲಾಪುರ, ಸುರಕೋಡ.

ರೋಣ ತಾಲೂಕಿನ ಸೂಡಿ, ಸೂಡಿ ವಾರ್ಡ್ ನಂ. 2, ಜನತಾಪ್ಲಾಟ್ ಮುಶಿಗೇರಿ, ಕಿಲ್ಲಾಹತ್ತಿರ ಮುಶಿಗೇರಿ, ಬಸ್ ಸ್ಟಾ್ಯಂಡ್ ಹತ್ತಿರ ಮುಶಿಗೇರಿ, ಹಿರೇಮಠ ಓಣಿ ನರೇಗಲ್, ಐಟಿಐ ಓಣಿ ನರೇಗಲ್, ರೋಣ ಪಟ್ಟಣದ ಸಂತೋಜಿ ಓಣಿ, ಪೊಲೀಸ್ ಸ್ಟೇಷನ್ ಶ್ರೀನಗರ,

ಮುಂಡರಗಿ ಪಟ್ಟಣದ ಮಂಜುನಾಥ ನಗರ, ಮುಷ್ಟಿ ಓಣಿ, ಭಜಂತ್ರಿ ಓಣಿ. ಮುಂಡರಗಿ ತಾಲೂಕಿನ ಮುಂಡರಗಿ, ಎಸ್.ಆರ್.ಕೆ. ತಾಂಡಾ, ಕೊಟಿಬಾಗ, ಹಿರೇವಡ್ಡಟ್ಟಿ, ವಡ್ಡರಓಣಿ ಹಿರೇವಡ್ಡಟ್ಟಿ, ಶಿರಹಟ್ಟಿ ಪಟ್ಟಣದ ಸಮಗಾರ ಓಣಿ, ವಾಲ್ಮೀಕಿ ಓಣಿ, ಶಿರಹಟ್ಟಿ, ತಾಲೂಕಿನ ಪು. ಬಡ್ನಿ ಶಾಲೆಯ ಹತ್ತಿರ, ಮಾಗಡಿ, ಶಿರಹಟ್ಟಿ, ಲಕ್ಷ್ಮೇಶ್ವರ ಪಟ್ಟಣದ ಸಮಗಾರ ಓಣಿ ಹುಲಗೇರಿ ಬಣ, ಗಜೇಂದ್ರಗಡ ಪಟ್ಟಣದ ಕುಂಬಾರ ಓಣಿ, ತಾಲೂಕಿನ ಗೋಗೇರಿಯಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ.

ಮೃತಪಟ್ಟವರ ವಿವರ:

ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರ ಪಟ್ಟಣ ನಿವಾಸಿ 40 ವರ್ಷದ ಪುರುಷ ಮೃತಪಟ್ಟಿದ್ದಾನೆ. ಅವರು ಜು. 28ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಜು. 29ರಂದು ಅವರ ಗಂಟಲ ದ್ರವದ ಮಾದರಿ ಪರೀಕ್ಷಾ ವರದಿಯಲ್ಲಿ ಕೋವಿಡ್-19 ಇರುವುದು ದೃಢಪಟ್ಟಿತ್ತು. ನ್ಯುಮೋನಿಯಾ, ತೀವ್ರ ಉಸಿರಾಟ ತೊಂದರೆಯಿಂದ ಆ. 1ರಂದು ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ವರದಿಯಿಂದ ತಿಳಿದುಬಂದಿದೆ. ಮೃತರ ಅಂತ್ಯಕ್ರಿಯೆಯನ್ನು ಕೋವಿಡ್-19ರ ಮಾರ್ಗಸೂಚಿಗಳನ್ವಯ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸುಂದರೇಶ ಬಾಬು ತಿಳಿಸಿದ್ದಾರೆ.

ಎಲ್ಲೆಲ್ಲಿ ಎಷ್ಟೆಷ್ಟು

ಗದಗ 862

ಮುಂಡರಗಿ 187

ನರಗುಂದ 192

ರೋಣ 242

ಶಿರಹಟ್ಟಿ 226

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net