ದಾವಣಗೆರೆ: ದಾವಣಗೆರೆ ವಾಲಿಬಾಲ್ ಅಸೋಸಿಯೇಷನ್ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ಮುಕ್ತಾಯಗೊಂಡ ಜಿಲ್ಲಾ ಮಟ್ಟದ ಪುರುಷರ ವಾಲಿಬಾಲ್ ಕ್ರೀಡಾಕೂಟದಲ್ಲಿ ಚನ್ನಗಿರಿ ತಾಲೂಕು ಕರೇಕಟ್ಟೆ ತಂಡ ದೇವನಗರಿ ಕಪ್ ಪ್ರಶಸ್ತಿ ಗಳಿಸಿದೆ.
ವಿಜೇತ ತಂಡಕ್ಕೆ 12 ಸಾವಿರ ರೂ. ಹಾಗೂ ಆಕರ್ಷಕ ಪಾರಿತೋಷಕ ನೀಡಲಾಯಿತು. ಉಳಿದಂತೆ ಮಲೇಬೆನ್ನೂರು ತಂಡ ದ್ವಿತೀಯ (8 ಸಾವಿರ ರೂ), ಹರಿಹರ ತಂಡ ತೃತೀಯ ( 5 ಸಾವಿರ ರೂ.), ದೇವರಾಜ ಅರಸು ಬಡಾವಣೆಯ ಬಾಲಕರ ತಂಡ ನಾಲ್ಕನೇ ಬಹುಮಾನವಾಗಿ 3 ಸಾವಿರ ರೂ. ಪಡೆದರು. ಜಿಲ್ಲೆಯ ವಿವಿಧೆಡೆಗಳಿಂದ 19 ತಂಡಗಳು ಭಾಗವಹಿಸಿದ್ದವು. ಹೊನಲು ಬೆಳಕಿನ ಈ ಟೂರ್ನಿ ತಡರಾತ್ರಿ 2 ಗಂಟೆಯರೆಗೂ ನಡೆಯಿತು.
ಹಿರಿಯ ಕ್ರೀಡಾಪಟುಗಳಾದ ಇಮ್ತಿಯಾಜ್, ಹಬೀಬಾ, ಮಾಜಿ ಯೋಧ ಪ್ರದೀಪ್ ಅವರನ್ನು ಸನ್ಮಾನಿಸಲಾಯಿತು. ವಾಲಿಬಾಲ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಗುರುರಾಜ್, ಸಂತೋಷ್ ಲೋಕಿಕೆರೆ, ನಟರಾಜ್, ಗಿರೀಶ್, ಐ. ಎಂ. ರಾಕೇಶ್, ಸುಮಂತ್, ಸಂದೀಪ್, ಶ್ರೀನಿವಾಸ್, ಯುವರಾಜ್ ಇದ್ದರು.