ಕರೆಮ್ಮ ನಾಯಕ 19ರಂದು ನಾಮಪತ್ರ ಸಲ್ಲಿಕೆ

Mahantesh Patil attanour
Published on

ದೇವದುರ್ಗ ವಿಧಾನಸಭಾ ಕ್ಷೇತ್ರ, ಜೆಡಿಎಸ್ ಅಭ್ಯರ್ಥಿ, ಕರೆಮ್ಮ ಜಿ.ನಾಯಕ, 19ರಂದು ನಾಮಪತ್ರ ಸಲ್ಲಿಕೆ,
Devadurga Assembly Constituency, JDS candidate, Karemma G. Nayaka, nomination paper submission on 19th.

ದೇವದುರ್ಗ: ಸ್ಥಳೀಯ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕರೆಮ್ಮ ಜಿ.ನಾಯಕ ಏ.19ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮಹಾಂತೇಶ ಪಾಟೀಲ್ ಅತ್ತನೂರು ಹೇಳಿದರು.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಜನವಿರೋಧಿ ಅಲೆ ಎದ್ದಿದೆ. ಸ್ಥಳೀಯ ಸಮಸ್ಯೆಗಳ ಪರಿಹಾರ ಪ್ರಾದೇಶಿಕ ಪಕ್ಷದಿಂದಲೇ ಸಾಧ್ಯವಿದೆ. ಕ್ಷೇತ್ರದಲ್ಲಿ ಶಾಸಕ ಕೆ.ಶಿವನಗೌಡ ನಾಯಕ ಅವರ ದುರಾಡಳಿತ ಹಾಗೂ ಭ್ರಷ್ಟಾಚಾರ ಚರ್ಚೆಯಾಗುತ್ತಿದೆ. ತಾಲೂಕಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀರಾವರಿ ಕೊಡುಗೆ ನೀಡಿದ್ದಾರೆ. ಈ ಚುನಾವಣೆಯಲ್ಲಿ ಅದಕ್ಕೆ ಪ್ರತಿಫಲ ಸಿಗಲಿದೆ ಎಂದರು.

ತಾಲೂಕು ಅಧ್ಯಕ್ಷ ಬುಡ್ಡನಗೌಡ ಪಾಟೀಲ್ ಜಾಗಟಗಲ್, ಕರೆಮ್ಮ ಜಿ.ನಾಯಕ, ಪ್ರಮುಖರಾದ ಅಕ್ಬರ್ ಸಾಬ್ ನಾಗುಂಡಿ, ಮುದುಕಪ್ಪ ನಾಯಕ, ಅಮರೇಶ ಪಾಟೀಲ್ ಪರ್ತಪುರ, ಶಾಲಂ ಉದ್ದಾರ, ರೇಣುಕಮ್ಮ, ಡಿ.ನಿರ್ಮಲಾ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net