ಕರೆಂಟ್‌ ಶಾಕ್‌ನಿಂದ ಕಾಡೆಮ್ಮೆ ಸಾವು

15KWR5
Published on

ಸಿದ್ದಾಪುರ: ವಿದ್ಯುತ್ ಶಾಕ್ ತಗುಲಿ ಕಾಡೆಮ್ಮೆಯೊಂದು ಮೃತಪಟ್ಟ ಘಟನೆ ತಾಲೂಕಿನ ಗೋದ್ಲಬೀಳು ಗ್ರಾಮದಲ್ಲಿ ಗುರುವಾರ ನಡೆದಿದೆ. ಈ ಸಂಬಂಧ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಅಗ್ಗೇರಿ ಗ್ರಾಮದ ಪ್ರಕಾಶ ರಾಮ ಶೇಟ್ ಬಂಧಿತ. ಬೆಳೆ ರಕ್ಷಣೆಗೆ ನೇರ ಕರೆಂಟ್ ನೀಡಿದ್ದ ಎನ್ನಲಾಗಿದೆ.
ಶಿರಸಿ ಡಿಎಫ್‌ಒ ಅಜ್ಜಯ್ಯ, ಸಿದ್ದಾಪುರ ಎಸಿಎಫ್ ಸಿ.ಎನ್.ಹರೀಶ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ಬಸವರಾಜ ಬೋಚಳ್ಳಿ, ನಿಡಗೋಡ ಆರ್‌ಎಫ್‌ಒ ವಿನಾಯಕ ಮಡಿವಾಳ ಪರಿಶೀಲನೆ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net