ಕರೆಂಟ್ ಶಾಕ್ ನೀರುಗಂಟಿ ಸಾವು

14 rpt CRIME
Published on

ರಿಪ್ಪನ್‌ಪೇಟೆ: ವಿದ್ಯುತ್ ಕಂಬಕ್ಕೆ ಬಲ್ಪ್ ಅಳವಡಿಸುತ್ತಿರುವ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಹುಂಚ ಗ್ರಾಪಂ ನೀರುಗಂಟಿ ಆನೆಗದ್ದೆಯಲ್ಲಿ ಮೃತಪಟ್ಟಿದ್ದಾನೆ. ನಾಗರಹಳ್ಳಿ ನಾರಾಯಣ (60) ಮೃತನು. ಗಣೇಶ ಹಬ್ಬದ ಪ್ರಯುಕ್ತ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಕೆಟ್ಟುಹೋದ ಬೀದಿದೀಪಗಳನ್ನು ತೆಗೆದು ಹೊಸದೀಪಗಳನ್ನು ಅಳವಡಿಸಲಾಗುತ್ತಿತ್ತು. ನಾರಾಯಣ ಮತ್ತು ಶ್ರೀಧರ ಆನೆಗದ್ದೆ ಗ್ರಾಮದಲ್ಲಿ ವಿದ್ಯುತ್ ಕಂಬಗಳಿಗೆ ಬಲ್ಪ್ ಅಳವಡಿಸಲು ಬುಧವಾರ ಮಧ್ಯಾಹ್ನ ಕಬ್ಬಿಣದ ಏಣಿಯನ್ನು ಬಳಸಿ ಕಂಬವೇರುತ್ತಿದ್ದ ಸಂದರ್ಭದಲ್ಲಿ ಏಣಿ ಪಕ್ಕಕ್ಕೆ ಸರಿದು ಪವರ್ ಲೈನ್‌ಗೆ ತಗುಲಿದ ಪರಿಣಾಮ ವಿದ್ಯುತ್ ಪ್ರವಹಿಸಿ ನಾರಾಯಣ ಕೆಳಗೆ ಬಿದ್ದು ಮೃತಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net