ಕರೀಘಟ್ಟದಲ್ಲಿ ಸ್ವಚ್ಛತಾ ಕಾರ್ಯ

SRP_29-02jpg
Published on

ಶ್ರೀರಂಗಪಟ್ಟಣ: ಪವರ್‌ಸ್ಟಾರ್ ಡಾ.ಪುನೀತ್ ರಾಜ್‌ಕುಮಾರ್ ಅವರ ಮೊದಲ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ತಾಲೂಕಿನ ಪ್ರಸಿದ್ಧ ಪ್ರಕೃತಿ ತಾಣ ಕರೀಘಟ್ಟದಲ್ಲಿ ಶನಿವಾರ ಪರಿಸರ ಪ್ರೇಮಿ ರಮೇಶ್ ನೇತೃತ್ವದಲ್ಲಿ ಬೆಳವಾಡಿಯ ಮಹಾರಾಜ ತಾಂತ್ರಿಕ ಇಂಜಿನಿಯರಿಂಗ್ (ಎಂಐಟಿ) ಕಾಲೇಜಿನ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯ ನಡೆಸಿದರು.

ಪ್ರವಾಸಿಗರು, ಭಕ್ತರು ಮತ್ತು ಕಿಡಿಗೇಡಿಗಳು ಎಲ್ಲೆಂದರಲ್ಲಿ ಎಸೆದಿದ್ದ ಪ್ಲಾಸ್ಟಿಕ್ ಕೈ ಚೀಲಗಳು, ನೀರಿನ ಮತ್ತು ಮದ್ಯದ ಖಾಲಿ ಗಾಜಿನ ಬಾಟಲಿಗಳನ್ನು ಸಂಗ್ರಹಿಸಿ ಒಂದೆಡೆ ರಾಶಿ ಹಾಕಿದರು. ಕರೀಘಟ್ಟ ಬೆಟ್ಟ ಏರುವ ಮೆಟ್ಟಿಲುಗಳ ಬಳಿ ಸಂಗ್ರಹವಾಗಿದ್ದ ತ್ಯಾಜ್ಯ ಹಾಗೂ ವ್ಯೆ ಪಾಯಿಂಟ್ ಬಳಿ ಪ್ಲಾಸ್ಟಿಕ್ ಕಸವನ್ನು 10 ಮೂಟೆಗಳಲ್ಲಿ ಸಂಗ್ರಹಿಸಿ ಬೆಟ್ಟವನ್ನು ಸ್ವಚ್ಛಗೊಳಿಸಿದರು. ಸಸಿಗಳ ಸುತ್ತ ಬೆಳೆದುಕೊಂಡಿದ್ದ ಹಸಿರು ಜೋಂಡು, ಮುಳ್ಳಿನ ಬಳ್ಳಿಗಳನ್ನು ಕತ್ತರಿಸಿ ತೆರವುಗೊಳಿಸಿದರು. ಎಂಐಟಿ ಕಾಲೇಜಿನ ಉಪನ್ಯಾಸಕರಾದ ಪ್ರೊ. ಕಿರಣ್‌ಕುಮಾರ್, ಪ್ರೊ.ಧನರಾಜ್ ಹಾಗೂ ವಿದ್ಯಾರ್ಥಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net