ಕರಾವಳಿಯಲ್ಲಿ ಮೋಡಮಿಶ್ರಿತ ವಾತಾವರಣ

male ssss
Published on

ಮಂಗಳೂರು: ಮಂಗಳೂರು, ಬೆಳ್ತಂಗಡಿ, ಬಂಟ್ವಾಳ ಸೇರಿದಂತೆ ಕರಾವಳಿಯಲ್ಲಿ ಹಲವೆಡೆ ಗುರುವಾರ ಮೋಡಮಿಶ್ರಿತ ವಾತಾವರಣ ಕಂಡುಬಂದಿದೆ. ಬೆಳಗ್ಗೆ ಅಲ್ಲಲ್ಲಿ ಹನಿ ಮಳೆಯಾದರೆ ನಂತರ ಬಿಸಿಲು ಸಹಿತ ಮೋಡಮಿಶ್ರಿತ ವಾತಾವರಣ ಕಂಡುಬಂದಿದೆ.

ಗ್ರಾಮೀಣ ಪ್ರದೇಶದ ಕಡಬ, ಸುಳ್ಯದಲ್ಲಿ ಮಧ್ಯಾಹ್ನ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಇನ್ನೂ ಎರಡು ದಿನಗಳ ಕಾಲ ಹಗುರ ಮಳೆಯ ಮುನ್ಸೂಚನೆ ನೀಡಿದೆ.

ಜಿಲ್ಲೆಯಲ್ಲಿ ಗರಿಷ್ಠ 29.9 ಡಿಗ್ರಿ ಸೆಲ್ಸಿಯಸ್, ಕನಿಷ್ಠ 23.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ದ.ಕ.ಜಿಲ್ಲೆಯಲ್ಲಿ ಬುಧವಾರ ಬೆಳಗ್ಗಿನ ವರೆಗೆ ಉಳ್ಳಾಲದಲ್ಲಿ ಗರಿಷ್ಠ 7.8 ಮಿಲಿ ಮೀಟರ್ ಮಳೆಯಾಗಿದೆ. ಜಿಲ್ಲೆಯ ಸರಾಸರಿ ಮಳೆ 7 ಮಿ.ಮೀ. ಆಗಿದೆ. ಬೆಳ್ತಂಗಡಿ 3.4 ಮಿ.ಮೀ, ಬಂಟ್ವಾಳ 4.8 ಮಿ.ಮೀ, ಮಂಗಳೂರು 5.9 ಮಿ.ಮೀ, ಪುತ್ತೂರು 11 ಮಿ.ಮೀ, ಸುಳ್ಯ 10.7 ಮಿ.ಮೀ, ಮೂಡುಬಿದಿರೆ 9.9 ಮಿ.ಮೀ, ಕಡಬ 8 ಮಿ.ಮೀ. ಮಳೆ ದಾಖಲಾಗಿದೆ.

ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬಿಟ್ಟು ಬಿಟ್ಟು ಮಳೆಯ ಮುನ್ಸೂಚೆನೆ ಇದೆ. ಅರಬ್ಬಿ ಸಮುದ್ರದಲ್ಲಿ ಗಾಳಿ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದ್ದು, ಅದರ ಪ್ರಭಾವ ಮುಂದಿನ 3-4 ದಿನದ ನಂತರ ಗುಡುಗು, ಮಿಂಚು ಮತ್ತು ಗಾಳಿ ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net