ಕರಾವಳಿಯಲ್ಲಿ ಮತ್ತೆ ಚುರುಕಾದ ಮುಂಗಾರು ಮಳೆ

mmg-june16-rain1
Published on

ಮಂಗಳೂರು: ಕರಾವಳಿಯಲ್ಲಿ ಕಳೆದ 15 ದಿನಗಳಿಂದ ದುರ್ಬಲವಾಗಿದ್ದ ಮುಂಗಾರು ಮಳೆ ಮತ್ತೆ ಚುರುಕಾಗಿದೆ.
ಶುಕ್ರವಾರ ಬೆಳಗ್ಗಿನ ಜಾವದಿಂದಲೇ ಸಾಧಾರಣದಿಂದ ಉತ್ತಮ ಮಳೆ ಆರಂಭಗೊಂಡು ಮುಂದುವರಿದಿದೆ. ದಟ್ಟ ಮೋಡ ಕವಿದು ಮಳೆಯೊಂದಿಗೆ ಸಿಡಿಲಿನ ಶಬ್ದ ಕೂಡ ಕೇಳುತ್ತಿದೆ. ಬೆಳಗ್ಗೆ ಕೆಲಸಕ್ಕೆ ಬಸ್, ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವವರಿಗೆ ಕಿರಿ ಕಿರಿ ಉಂಟಾಯಿತು.
ಜೂನ್ ತಿಂಗಳಿನಲ್ಲಿ ಮಳೆ ಕೊರತೆ ಕಾಣಿಸಿಕೊಂಡ ಪರಿಣಾಮ ಭತ್ತ ಬೆಳೆಯುವ ರೈತರು ಆತಂಕಗೊಂಡಿದ್ದರು.
ಜು.9 ರಿಂದ 4 ದಿನಗಳ ಕಾಲ ಕರಾವಳಿ, ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಮಳೆಯಾಗಲಿರುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net