ಕರಾವಳಿ ಮೂಲದ ಯುವಕ ಭಾರತೀಯ ಸೇನೆಯ Lieutenant is the junior most Commissioned Officer ಆಗಿ ಆಯ್ಕೆ

Published on

ಪುತ್ತೂರು: ಕರಾವಳಿ ಮೂಲದ ಪ್ರಸ್ತುತ ಮಹರಾಷ್ಟದಲ್ಲಿ ವಾಸಿಸುತ್ತಿರುವ ಶಿಬಿನ್ ಆರ್ ಅಳ್ವ ಅವರು ಭಾರತೀಯ ಸೇನೆಯ Lieutenant is the junior most Commissioned Office ಆಗಿ ಆಯ್ಕೆಯಾಗಿದ್ದಾರೆ.

ಮೂಲತಃ ದ. ಕ ಜಿಲ್ಲೆಯ ಬಂಟ್ವಾಳದವರಾದ ಇವರು 2020ನೇ ಸಾಲಿನ ತರಬೇತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಭಾರತೀಯ ಸೇನೆಯಲ್ಲಿ ಲೆಪ್ಟಿನೆಂಟ್ ಆಗಿ ಕರ್ತವ್ಯ ನಿರ್ವಹಿಸಲು ಆಯ್ಕೆಯಾಗಿದ್ದಾರೆ.
ಆಯ್ಕೆಯಾದ 184 ಅಧಿಕಾರಿಗಳ ಪಾಸಿಂಗ್ ಔಟ್ ಪರೇಡ್ ಶನಿವಾರ ಚೆನ್ನೈಯ ಆಫೀಸರ್ಸ್ ತರಬೇತಿ ಅಕಾಡೆಮಿಯಲ್ಲಿ ನಡೆಯಿತು.
ಈ ಬ್ಯಾಚ್ ನಲ್ಲಿ ಅವಕಾಶ ಪಡೆದ ಏಕೈಕ ಕನ್ನಡಿಗ ಲೆ. ಶಿಬಿನ್ ಅರ್ ಅಳ್ವ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆರು ತಿಂಗಳಿಗೊಮ್ಮೆ ನಡೆಯುವ ಶಾರ್ಟ್ ಸರ್ವಿಸ್ ಕಮೀಷನ್ ವಿಭಾಗದಲ್ಲಿ ಭಾಗವಹಿಸಿದ ಅವರು ಕಳೆದ 11 ತಿಂಗಳಿನಿಂದ ಚೆನ್ನೈಯ ಆಫೀಸರ್ಸ್ ತರಬೇತಿ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು. ಒಟ್ಟು 184 ಭಾರತೀಯರು ತರಬೇತಿ ಪಡೆದಿದ್ದು, ಅದರಲ್ಲಿ 148 ಯುವಕ ಹಾಗೂ 36 ಯುವತಿಯರು ಆಯ್ಕೆಯಾಗಿದ್ದಾರೆ.
ಇವರು ಬಂಟ್ವಾಳ ತಾಲೂಕು ಪಜೀರು ಗ್ರಾಮದ ಕುವೆತ್ತಬೈಲು ತೆಂಕಬೆಟ್ಟು ಗುತ್ತು ರತ್ನಾಕರ ಆಳ್ವ ಮತ್ತು ಸಿಮಂತೂರು ಪರೆಂಕಿಲ ಶ್ರೀಮತಿ ಕುಶಲ ಆಳ್ವ ಅವರ ಪುತ್ರ. ತಂದೆ ರತ್ನಾಕರ ಅಳ್ವರವರು 37 ವರ್ಷಗಳ ಕಾಲ ಭಾರತದ ನೌಕಾ ಸೇನೆಯ ತಾಂತ್ರಿಕ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದು, ಸಿವಿಲಿಯನ್ ಟೆಕ್ನಿಕಲ್ ಆಫೀಸರ್ ಆಗಿ ನಿವೃತ್ತಿ ಹೊಂದಿದ್ದರು.
ಶಿಬಿನ್ ಅವರು ಕೇಂದ್ರಿಯವಿದ್ಯಾಲಯ ನವೇಲ್ ಸ್ಟೇಷನ್ ಕರಂಜ ಮುಂಬೈಯಲ್ಲಿ ಒಂದರಿಂದ ಪಿಯುಸಿಯವರೆಗೆ ಶಿಕ್ಷಣ ಪೂರೈಸಿ ನಂತರ ಎಲೆಕ್ಟ್ರಾನಿಕ್ಸ್ ಇಂಜೀನಿಯರಿಂಗ್ ನಲ್ಲಿ ಪದವಿಯನ್ನು ಪಡೆದಿದ್ದಾರೆ.

ಭಾರತೀಯ ಸೇನೆಯ Lieutenant is the junior most Commissioned Office ಆಗಿ ಆಯ್ಕೆಯಾದ  ಶಿಬಿನ್ ಆರ್ ಅಳ್ವ.
ಭಾರತೀಯ ಸೇನೆಯ Lieutenant is the junior most Commissioned Office ಆಗಿ ಆಯ್ಕೆಯಾದ ಶಿಬಿನ್ ಆರ್ ಅಳ್ವ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net