ಕರಾಮುವಿ ಕುಲಪತಿ ಅಧಿಕಾರಾವಧಿ ವಿಸ್ತರಣೆ

HALASE SV DVG VV
Published on

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಅವರ ಅಧಿಕಾರಾವಧಿಯನ್ನು ವಿಸ್ತರಣೆ ಮಾಡಲಾಗಿದೆ.

ಅವರ ಮೂರು ವರ್ಷದ ಅಧಿಕಾರಾವಧಿ ನವೆಂಬರ್ 11ಕ್ಕೆ ಪೂರ್ಣಗೊಳ್ಳುತ್ತಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಾವಧಿ ವಿಸ್ತರಣೆ ಮಾಡುವ ಕುರಿತು ಜೂನ್ 23ರಂದು ಕರಾಮುವಿ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ಪತ್ರ ಬರೆದು ಕೋರಿಕೊಂಡಿದ್ದರು.

ಇದಕ್ಕೆ ಸಮ್ಮತಿಸಿರುವ ರಾಜ್ಯಪಾಲರು ಪ್ರೊ.ಶರಣಪ್ಪ ಅವರ ಅಧಿಕಾರಾವಧಿಯನ್ನು 2026ರ ಜೂನ್ 30ರವರೆಗೆ ಅಥವಾ ಮುಂದಿನ ಆದೇಶದ ತನಕ ವಿಸ್ತರಣೆ ಮಾಡಿ ಬುಧವಾರ ಆದೇಶ ಹೊರಡಿಸಿದ್ದಾರೆ.

ಇದರಿಂದ ಹೆಚ್ಚುವರಿಯಾಗಿ 8 ತಿಂಗಳು ಕಾಲ ಕುಲಪತಿಯಾಗಿ ಕಾರ್ಯನಿರ್ವಹಿಸಲು ಅವಕಾಶ ದೊರೆತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net