ಕರಾಟೆಯಲ್ಲಿ ಸ್ಕ್ವಾಯ್ ನ್ಯಾಷನಲ್ ಶಾಲೆ ವಿದ್ಯಾರ್ಥಿಗಳ ಸಾಧನೆ

01
Published on

ಹೊಳೆನರಸೀಪುರ: ಮೈಸೂರು ಜಿಲ್ಲೆಯ ಕೃಷ್ಣರಾಜನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಇತ್ತೀಚೆಗೆ ವರ್ಲ್ಡ್ ಟ್ರೆಡಿಷನಲ್ ಕರಾಟೆ-ಡೂ-ಯೂನಿಯನ್ ಆಯೋಜಿಸಿದ್ದ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಪಟ್ಟಣದ ಸ್ಕ್ವಾಯ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಕತಾ ಹಾಗೂ ಫೈಟಿಂಗ್ ವಿಭಾಗಗಳಲ್ಲಿ ಹಲವು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬಾಲಕರ ಕತಾ ವಿಭಾಗಗಳಲ್ಲಿ ಬಿ.ಸುಜನ್, ಎ.ಕುಶಾಲ್, ಡಿ.ವಿ.ಸೋಹನ್‌ಮೌರ್ಯ, ಎಚ್.ಎಸ್.ನಿಖಿತ್, ಮಹಮ್ಮದ್ ಅಬ್ಬಾಸ್, ಮಹಮ್ಮದ್ ಹುಸೇನ್, ಎಂ.ಎಲ್.ಗೋಕುಲ್, ಮಹಮ್ಮದ್ ಮುಸ್ತಾಫ, ಪವನ್‌ಗೌಡ, ಬೋಧನ್ ಪ್ರಥಮ ಸ್ಥಾನ ಗಳಿಸಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಪಿ.ಐಶ್ವರ್ಯಾ, ಎಲ್.ರೀತು, ಜಿ.ಬಿ.ಸುರಭಿ, ಒ.ವೈ.ಧನ್ಯಶ್ರೀ, ಕಾವ್ಯಾ ಪ್ರಥಮ ಸ್ಥಾನ ಪಡೆದಿದ್ದಾರೆ.

ದಿವಿತ್ ವೈ.ಗೌಡ, ಬಿ.ಎಲ್.ಲೇವಿತ್, ಪಿ.ಐಸಿರಿ, ಪಶುಪತಿ, ಎಚ್.ಆರ್.ಉಲ್ಲಾಸ್ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಜತೆಗೆ ಫೈಟಿಂಗ್ ವಿಭಾಗದಲ್ಲೂ ಭಾಗವಹಿಸಿದ್ದ ವಿದ್ಯಾರ್ಥಿಗಳು ನಾಲ್ಕು ಪ್ರಥಮ ಸ್ಥಾನ, ಎರಡು ದ್ವಿತೀಯ ಸ್ಥಾನ ಮತ್ತು ಒಂದು ತೃತೀಯ ಸ್ಥಾನವನ್ನು ಗಳಿಸಿದ್ದಾರೆ.

ತರಬೇತುದಾರರಾದ ಎಚ್.ಎಂ.ಅಬ್ದುಲ್ ಹೈ (ಅಧ್ಯಕ್ಷರು ಹಾಸನ ಜಿಲ್ಲಾ ಸ್ಕ್ವಾಯ್ ಸಂಸ್ಥೆ) ಈ ಸ್ಪರ್ಧೆಯಲ್ಲಿ ಹಾಜರಿದ್ದರು. ಎಲ್.ಎಸ್.ಹರ್ಷವರ್ಧನ್, ಎಚ್.ಎನ್.ಪ್ರೇಮ್‌ಕುಮಾರ್ ಹಾಗೂ ಡಿ.ಶಂಕರ್ ದಯಾಳ್ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net