ಕರಾಟೆಯಲ್ಲಿ ವಿಶ್ವಮಾನವ ಶಾಲೆಗೆ ಸಮಗ್ರ ಪ್ರಶಸ್ತಿ

CTD NEWS VISHVA MANAVA----
Published on

ಚಿತ್ರದುರ್ಗ: ದಾವಣಗೆರೆಯಲ್ಲಿ ಭಾನುವಾರ ನಡೆದ 5ನೇ ರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಫ್ ಸ್ಪರ್ಧೆಯಲ್ಲಿ ಚಿತ್ರದುರ್ಗ ಸೀಬಾರ-ಗುತ್ತಿನಾಡು ವಿಶ್ವ ಮಾನವ ವಸತಿ ಶಾಲೆ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಪಡೆದಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಎನ್.ಎಸ್. ಕವನ, ಜಿ.ಕೆ. ಪೂರ್ವಿಕಾ, ಎನ್. ಚಂದನಾ, ಎಂ. ಅರ್ಚನಾ ಹಾಗೂ ಬಾಲಕರ ವಿಭಾಗದಲ್ಲಿ ಜಿ.ಕೆ. ನಂದನ್, ನವೀದ್‌ಅಹಮದ್ ಮುಲ್ಲಾ, ಎಲ್. ಗೌತಮ್, ಕೆ.ಪಿ. ಚೇತನ್, ಡಿ. ಚೇತನ್, ಜಿ. ಮನೋಜ್, ಮಧುಸೂದನ್, ಎಂ.ಆರ್. ದೀಪಕ್‌ರೆಡ್ಡಿ, ಟಿ. ಶಶಾಂಕ್‌ರೆಡ್ಡಿ, ಎನ್.ಎಸ್. ರಾಘವ, ಮನೋಜ್, ದಿವಾಕರ ರೆಡ್ಡಿ, ಅರುಣ್‌ರೆಡ್ಡಿ, ಕೆ. ಪ್ರವೀಣ್‌ಕುಮಾರ್ ಹಾಗೂ ಆರ್. ಗಿರೀಶ್ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

ಮುಖ್ಯ ಶಿಕ್ಷಕರಾದ ಜಿ.ಆರ್. ಚನ್ನಬಸಪ್ಪ, ಬಿ.ಜಿ. ಶಿವರುದ್ರಯ್ಯ, ಶಿಕ್ಷಣ ಸಂಯೋಜಕರಾದ ಎಂ.ಜಿ. ವೇದಾವತಿ, ಎಂ. ದೀಪಾ,ದೈಹಿಕ ಶಿಕ್ಷಣ ಶಿಕ್ಷಕರಾದ ಎಂ.ಪಿ. ಪಾಪಣ್ಣ, ಐ. ಶಶಿಧರ, ಎಚ್.ಎಂಂ. ಮಂಜುನಾಥ್, ಬಿ . ಪಾಪಣ್ಣ, ಶಿಕ್ಷಕರಾದ ರಂಗಪ್ಪ, ಎಂ.ಬಿ. ಸ್ವಾಮಿ, ಎ.ಎಲ್. ರೂಪಾ, ಉಮಾದೇವಿ, ಮಂಜುಳಾ,ಲೋಕೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net