

ಸುಂಟಿಕೊಪ್ಪ: ರಾಷ್ಟ್ರೀಯ ವೋವಿನಮ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಸೋಮವಾರಪೇಟೆ ಕುವೆಂಪು ಶಾಲೆಯ ವಿದ್ಯಾರ್ಥಿನಿ ಜಿ.ಎಸ್. ಮಾನಸಾ ಕಂಚಿನ ಪದಕ ಗಿಟ್ಟಿಸಿದ್ದಾರೆ.
ಹೈದಾರಬಾದ್‌ನಲ್ಲಿ ನಡೆದ 12ನೇ ರಾಷ್ಟ್ರೀಯ ವೋವಿನಮ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಮಾನಸಾ ಕಂಚಿನ ಪದಕವನ್ನು ಪಡೆದುಕೊಂಡಿದ್ದು, ಕೊಡಗು ವುಶು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕರಾಟೆ ತರಬೇತುದಾರ ಎನ್.ಸಿ. ಸುದರ್ಶನ್ ಈಕೆಗೆ ತರಬೇತಿ ನೀಡಿದ್ದಾರೆ.