

ಕುಶಾಲನಗರ: ಆಂಧ್ರಪ್ರದೇಶದ ವಿಶಾಖಪಟ್ಟಣಂನ ರಾಜೀವಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 6ನೇ ಅಂತಾರಾಷ್ಟ್ರೀಯ ಕರಾಟೆಯಲ್ಲಿ ಕುಶಾಲನಗರದ ಕೌಶಿಕ್ ಚಿನ್ನದ ಪದಕ ಪಡೆದಿದ್ದಾರೆ.
ಕರಾಟೆಯಲ್ಲಿ ಶ್ರೀಲಂಕಾ, ನೇಪಾಳ, ಜಪಾನ್, ಸೌದಿ ಅರೇಬಿಯ, ಇರಾನ್ ಸೇರಿದಂತೆ ಒಟ್ಟು 15 ದೇಶಗಳಿಂದ 21 ಸ್ಪರ್ಧಿಗಳು ಭಾಗವಹಿಸಿದ್ದರು. ಈ ಪೈಕಿ ಕುಶಾಲನಗರದ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಭಾರತದ ಗೌರವವನ್ನು ಹೆಚ್ಚಿಸಿರುವ ಕೌಶಿಕ್ ಅವರಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನಮೋಹನ ರೆಡ್ಡಿ ಪದಕ ಪ್ರದಾನ ಮಾಡಿದರು. ಕೌಶಿಕ್ ಬೆಂಗಳೂರಿನ ಪಿಇಎಸ್ ಕಾಲೇಜಿನಲ್ಲಿ 3ನೇ ವರ್ಷದ ಬಿಬಿಎ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ವ್ಯಾಸಂಗ ಮಾಡುತ್ತಿದ್ದಾರೆ.