

ಹಾಸನ: ಜಪಾನಿನ ಗ್ರಾಂಡ್ ಮಾಸ್ಟರ್ ಹಂಶಿ ಕಾಕಿನೋಹನ ಸಮ್ಮುಖದಲ್ಲಿ ದುಬೈನ ಕೆಂಟ್ ಕಾಲೇಜು ಆವರಣದಲ್ಲಿ ಕಳೆದ ನ.13 ರಂದು ನಡೆದ ಅಂತರರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿ 16 ಚಿನ್ನದ ಪದಕ ಮತ್ತು 20 ಬೆಳ್ಳಿ ಪದಕಗಳನ್ನು ಗೆದ್ದಿರುವ ಜಿಲ್ಲೆಯ 20 ಮಕ್ಕಳನ್ನು ಶುಕ್ರವಾರ ಸಂಜೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶಾಸಕ ಪ್ರೀತಂಗೌಡ ಸನ್ಮಾನಿಸಿದರು.
ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರ ಸಮ್ಮುಖದಲ್ಲಿ ಕರಾಟೆ ಪಟುಗಳಾದ ತರುಣ್, ಎಚ್.ಎನ್. ಸನ್ಮಿತ್, ಸಮೃದ್ಧ್, ರಾಘವ್, ಎಲ್. ಆದಿತ್ಯ, ತುಷಾರ, ಆದಿತ್ಯ ಆರ್ ಕೌಶಿಕ್, ಕೃಷನ್ ಗೌಡ, ಎಚ್. ಅನುಷಾ, ಎಂ. ಝೇಂಕಾರ್, ವಿ.ಎಸ್. ಗಗನ್ ದೀಪ್, ಇ. ಮಲ್ಲೇಶ್, ಎಂ.ವೈ. ಲೋಹಿತ್, ಕೆ.ಎಲ್. ಮಂಜುನಾಥ್, ಚಂದನ್ ಎನ್ ಗೌಡ, ಕುಶಾಲ್ ಯಶ್, ಅನನ್ಯ ಆರ್ ಕೌಶಿಕ್, ಪುನೀತ್ ಗೌಡ, ಹೇಮಂತ್ ಸಾತ್ವಿಕ್ ಮತ್ತು ಭುವನ್ ಶರ್ಮಾ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ತರಬೇತಿದಾರ ಎಚ್.ಕೆ. ದೀಪಕ್, ಮತ್ತು ತರಬೇತಿದಾರ ಎಚ್.ಜಿ. ನಟರಾಜ್, ಟೀಮ್ ಮ್ಯಾನೇಜರ್ ರಾಘವೇಂದ್ರ ಮತ್ತು ಪೋಷಕರು ಹಾಜರಿದ್ದರು.