ಕರಾಟೆ ಅಸ್ಕಾ ಚಾಂಪಿಯನ್‌ಶಿಪ್

Karate
Published on

ಕಲಬುರಗಿ: ನಗರದ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಮತ್ತು ಅಜಯಕುಮಾರ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ ಮಂಗಳವಾರ ಅಸ್ಕಾ ಓಪನ್ ಚಾಂಪಿಯನ್‌ಶಿಪ್ ಆಯೋಜಿಸಲಾಗಿತ್ತು.
ತಾಲೂಕ ದೈಹಿಕ ಅಧಿಕಾರಿ ರಾಜಶೇಖರ್ ಗೋನಾಯಕ್ ಮಾತನಾಡಿ, ಇಂಡಿಯನ್ ಕರಾಟೆ ಫೌಂಡರ್ ಮತ್ತು ಗ್ರ್ಯಾಂಡ್​ ಮಾಸ್ಟರ್ ಬಿ.ಎಂ.ನರಸಿಂಹನ್ ಅವರು ೨೫ನೇ ಜನವರಿ ೨೦೨೩ರಂದು ನಿಧನ ಹೊಂದಿದರು. ನಂತರ ಇಂಡಿಯನ್ ಕರಾಟೆಯ ಸೀನಿಯರ್ ಸ್ಟೂಡೆಂಟ್ ಶ್ರೀನಿವಾಸ್ ಅವರಿಗೆ ಇಂಡಿಯನ್ ಕರಾಟೆಯ ಎರಡನೆಯ ಗ್ರ್ಯಾಂಡ್​ ಮಾಸ್ಟರ್ ಆಗಿ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.
೫ ವಿದ್ಯಾರ್ಥಿಗಳಿಗೆ ಬ್ಲಾಕ್ ಬೆಲ್ಟ್ ಹಾಗೂ ೫ ವಿದ್ಯಾರ್ಥಿಗಳಿಗೆ ೨ ಮತ್ತು ೩ನೇ ಡಾನ್ ಪ್ರಮಾಣಪತ್ರ ನೀಡಲಾಯಿತು. ಕರಾಟೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಟ್ರೋಫಿ, ಮೆಡಲï ಮತ್ತು ಪ್ರಮಾಣಪತ್ರ ವಿತರಿಸಲಾಯಿತು. ಇಂಡಿಯನï ಕರಾಟೆ ಗ್ರಾಂಡ್ ಮಾಸ್ಟರ್ ಶ್ರೀನಿವಾಸ್, ಡಿಸ್ಟಿçಕ್ಟ್ ಚೀಫ್ ಇನ್ಸ್ಟ್ರಕ್ಟರ್ ರಾಜವರ್ಧನ್ ಚೌಹಾಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net