ಕರವೇ ಮಹಿಳಾ ಘಟಕದ ಪದಾಧಿಕಾರಿಗಳ ನೇಮಕ

24 ckm 8
ಚಿಕ್ಕಮಗಳೂರಿನ ಹೇಮಾಂಗಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು. ಅಶೋಕ್ ಕೆಂಪನಹಳ್ಳಿ, ಅನ್ನಪೂರ್ಣ, ಶೈಲಾ, ಮಂಜುಳಾಬಾಯಿ, ಭಾರತಿ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಜಿಲ್ಲಾ ಕಾರ್ಯದರ್ಶಿ ಅನ್ನಪೂರ್ಣ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಶೈಲಾ ಸೇರಿದಂತೆ ತಾಲೂಕು ಹಾಗೂ ನಗರ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಅಶೋಕ್ ಕೆಂಪನಹಳ್ಳಿ ತಿಳಿಸಿದರು.

ನಗರದ ಹೇಮಾಂಗಣದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಜಿಲ್ಲಾ ಸಾಂಸ್ಕೃತಿಕ ಘಟಕಕ್ಕೆ ಅಧ್ಯಕ್ಷೆಯಾಗಿ ಹರುಣಾಕ್ಷಿ, ಕರವೇ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ವರಿ, ಉಪಾಧ್ಯಕ್ಷರಾಗಿ ಸುಮಾ, ರತ್ನ, ಕಾರ್ಯದರ್ಶಿಯಾಗಿ ವಿಜಯಲಕ್ಷಿö್ಮÃ, ತಾಲೂಕು ಸಾಂಸ್ಕೃತಿಕ ಘಟಕದ ಅಧ್ಯಕ್ಷರಾಗಿ ಭಾರತಿ ಅವರನ್ನು ನೇಮಿಸಲಾಗಿದೆ.

ನಗರ ಘಟಕದ ಅಧ್ಯಕ್ಷೆ ಮಂಜುಳಾಬಾಯಿ, ಪ್ರಧಾನ ಕಾರ್ಯದರ್ಶಿ ಸಂಗೀತ, ಉಪಾಧ್ಯಕ್ಷರಾಗಿ ಲತಾ, ರೇಖಾ, ಕಾರ್ಯದರ್ಶಿ ಆಶಾ ಹಾಗೂ ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ಚಂದನ ಅವರನ್ನು ನೇಮಿಸಿದ್ದು ಕನ್ನಡಹಬ್ಬ ಹಾಗೂ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನ್ಯಾಯಸಮ್ಮತವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net