ಕರವೇ ನೂತನ ಜಿಲ್ಲಾಧ್ಯಕ್ಷೆಯಾಗಿ ಬಿ.ಮಂಗಳಮ್ಮ ನೇಮಕ

IMG-20241105-WA0036
Published on

ಚಾಮರಾಜನಗರ: ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾ‌ರ್ ಶೆಟ್ಟಿ ಬಣದ ಜಿಲ್ಲಾ ಮಹಿಳಾ ಘಟಕದ ನೂತನ ಅಧ್ಯಕ್ಷೆಯಾಗಿ ಬಿ.ಮಂಗಳಮ್ಮ ನೇಮಕಗೊಂಡಿದ್ದಾರೆ.

ನಗರದ ಪ್ರವಾಸಿಮಂದಿರದಲ್ಲಿ ನಡೆದ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳ ಸಭೆಯಲ್ಲಿ ಸರ್ವಾನುಮತದಿಂದ ಬಿ.ಮಂಗಳಮ್ಮ ಅವರನ್ನು ನೇಮಕಮಾಡಿ ವೇದಿಕೆ ಜಿಲ್ಲಾಧ್ಯಕ್ಷೆ ಆ‌ರ್.ಮೋಹನ್ ಅವರಿಗ ನೇಮಕಾತಿ ಆದೇಶಪತ್ರ ವಿತರಿಸಿದರು.

ನೇಮಕಾತಿ ಆದೇಶಪ್ರತಿ ವಿತರಿಸಿದ ವೇದಿಕೆ ಜಿಲ್ಲಾಧ್ಯಕ್ಷ ಆರ್.ಮೋಹನ್ ಮಾತನಾಡಿ, ಸಂಘಟನೆಯು  ಬಿ.ಮಂಗಳಮ್ಮ  ಅವರ ಹಲವು ವರ್ಷಗಳ ನಿಷ್ಕಳಂಕ ನಾಡ ಪ್ರೇಮ, ನಡೆ ನುಡಿ, ಉತ್ತಮ ಚಾರಿತ್ಯ ಗುಣಗಳು ಹಾಗೂ ಕೆಚ್ಚೆದೆಯ ಯಶಸ್ಸಿ ಹೋರಾಟಗಳು ಮತ್ತು ಚಾಮರಾಜನಗರ ಜಿಲ್ಲೆಯ ಕಾರ್ಯಕರ್ತರ ಒತ್ತಾಯದ ಮೇರಗೆ ಮತ್ತು ತಮ್ಮ ನಾಡ ಪ್ರೇಮ ಹಾಗೂ ಕನ್ನಡ ಪರ ಕಾಳಜಿಯನ್ನು ಗೌರವಿಸಿ ಅವರನ್ನು ಚಾಮರಾಜನಗರ ಜಿಲ್ಲಾ ಘಟಕದ.ಮಹಿಳಾ ವಿಭಾಗದ ಜಿಲ್ಲಾ ಅಧ್ಯಕ್ಷರಾಗಿ ನೇಮಿಸಲಾಗಿದೆ. ಇನ್ನೂ ಮುಂದೆಯೂ ಅವರ ಪ್ರಾಮಾಣಿಕ ಹೋರಾಟ ಹಾಗೂ ನಾಡ ಅಭಿಮಾನವನ್ನು ಎತ್ತಿ ಹಿಡಿಯುವುದರೊಂದಿಗೆ ರೈತರ. ಕಾರ್ಮಿಕರ ಮಹಿಳೆಯರ, ವಿದ್ಯಾರ್ಥಿಗಳ ಹಾಗೂ ನೊಂದವರ ಸಮಸ್ಯೆಗಳಿಗೆ ಸ್ಪಂದಿಸಿ ಸೇವೆಯನ್ನು ಮುಂದುವರಿಸಲು ತಾಯಿಭುವನೇಶ್ವರಿಯು ಅವರಿಗೆ ಸಕಲ ಶಕ್ತಿಯನ್ನು ಕರಿಣಿಸಲೆಂದು ಹಾರೈಸಿದರು.

ವೆಂಕಟೇಶನಾಯಕರಿಗೆ ಸನ್ಮಾನ: 

ಇದೇ ಸಂದರ್ಭದಲ್ಲಿ ವೇದಿಕೆ ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್ ನಾಯಕ ಅವರ ತಮ್ಮ 42ನೇ ವರ್ಷದ ಹುಟ್ಟು ಹಬ್ಬವನ್ನು  ವೇದಿಕೆ ಪದಾಧಿಕಾರಿಗಳೊಂದಿಗೆ ಕೇಕ್ ಕತ್ತರಿಸಿ ಕೇಕ್ ತಿನ್ನಿಸುವ ಮೂಲಕ ಆಚರಿಸಿಕೊಂಡರು. ಅವರನ್ನು ವೇದಿಕೆ ವತಿಯಿಂದ ಸನ್ಮಾನಿಸಿ ಹುಟ್ಟುಹಬ್ಬದ ಶುಭಾಶಯ ಕೋರಲಾಯಿತು.

ಸಭೆಯಲ್ಲಿ ವೇದಿಕೆ ಜಿಲ್ಲಾ ಗೌರವ ಜಿಲ್ಲಾಧ್ಯಕ್ಷ  ಕೃಷ್ಣ ನಾಯಕ,  ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಿಯಾಜ್ ಪಾಷ,  ಜಿಲ್ಲಾ ಉಪಾಧ್ಯಕ್ಷರಾದ ವೆಂಕಟೇಶ್ ನಾಯಕ, ಯಳಂದೂರು ನಾಗರಾಜು,  ನಾಗೇಶ್ ನಾಯಕ್, ಚಾಮರಾಜನಗರ ತಾಲೂಕು ಮುಖಂಡರಾದ ಮಹೇಶ್,  ಮಾದೇಶ್, ಮಹಿಳಾ ವಿಭಾಗದ ಜಿಲ್ಲಾ ಅಧ್ಯಕ್ಷೆ   ಬಿ.ಮಂಗಳಮ್ಮ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಮ್ಮ, ಉಷಾರಾಣಿ, ಮರಮ್ಮ, ಮಹದೇವಮ್ಮ, ಭಾಗ್ಯ, ಪುಷ್ಪಲತಾ, ಮಂಗಳಮ್ಮ, ಶಿವಮ್ಮ, ಮರಿಯಮ್ಮ, ರಾಜಮ್ಮ, ಕಾಮಗೆರೆ ಶಿವಮ್ಮ, ಚಾಮರಾಜನಗರ ಮಂಜು, ನಾಗಮಣಿ, ಮಂಜುಳ ಮಹದೇವಶೆಟ್ಟಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net