ಕರ್ನಾಟಕ ಹೈಸ್ಕೂಲ್‌ಗೆ ಜಯ

19 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಷ್ಟ್ರೀಯ ಕ್ರೀಡಾ ದಿನ ನಿಮಿತ್ತ ನಗರದ ರಾಷ್ಟ್ರೀಯ ಕ್ರೀಡಾ ದಿನ ಆಚರಣಾ ಸಮಿತಿ ಆಶ್ರಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ಪೈಕಿ 17ಕ್ಕಿಂತ ಕಿರಿಯ ಬಾಲಕರ ಅಂತರಶಾಲಾ ಬಾಸ್ಕೆಟ್‌ಬಾಲ್ ಪಂದ್ಯಾವಳಿಯಲ್ಲಿ ಇಲ್ಲಿನ ಕರ್ನಾಟಕ ಹೈಸ್ಕೂಲ್ ಜಯಗಳಿಸಿದೆ.
ರೋವರ್ಸ್ ಕ್ಲಬ್ ಅಂಕಣದಲ್ಲಿ ನಡೆದ ಫೈನಲ್‌ನಲ್ಲಿ ಕೆಲಗೇರಿಯ ಜೆಎಸ್‌ಎಸ್ ಕೆಲಗೇರಿ ಶಾಲೆಯ ಎದುರು 53-20 ಅಂಕಗಳಿಂದ ಗೆಲುವು ಸಾಧಿಸಿದೆ. ಪ್ರದೀಪ ಚೌಗಲಾ(23) ಹಾಗೂ ನಾಯಕ ರಮೆಶ ಬೆಕ್ಕೇರಿ(16) ತಂಡದ ಜಯದ ರೂವಾರಿಗಳು. ಜೆಎಸ್‌ಎಸ್ ಪರ ಅರ್ಹಾಮ್ ಜಮಾದಾರ(9) ಉತ್ತಮವಾಗಿ ಆಡಿದರು.
ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಕರ್ನಾಟಕ ಹೈಸ್ಕೂಲು 43-16 ಅಂಕಗಳಿಂದ ಶಾಂತಿಸದನ ಹೈಸ್ಕೂಲ್ ತಂಡವನ್ನು ಮಣಿಸಿದರೆ, ಜೆಎಸ್‌ಎಸ್ ಶಾಲೆ 23-17 ಅಂಕಗಳಿಂದ ರಾಜೀವ ಗಾಂಧಿ ವಿದ್ಯಾಲಯದ ಎದುರು ಜಯಿಸಿತ್ತು. ಮೂರನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಶಾಂತಿಸದನ ಹೈಸ್ಕೂಲು ರಾಜೀವ ಗಾಂಧಿ ವಿದ್ಯಾಲಯವನ್ನು 23-14 ಅಂಕಗಳಿಂದ ಮಣಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net