ಕರಡಿಗುಡ್ಡದಲ್ಲಿ ವಿದ್ಯುತ್ ತಗುಲಿ 15 ಕುರಿ ಸಾವು

IMG-20230726-WA0024
Published on

ಕನಕಗಿರಿ(ಕೊಪ್ಪಳ): ತಾಲೂಕಿನ ಕರಡಿಗುಡ್ಡದಲ್ಲಿ ವಿದ್ಯುತ್ ತಂತಿ ತುಂಡರಿಸಿ ಬಿದ್ದು 15 ಕುರಿ ಹಾಗೂ ಎರಡು ಎತ್ತುಗಳು ಸಾವನ್ನಪ್ಪಿರುವ ಘಟನೆ ಬುಧವಾರ ರಾತ್ರಿ ನಡೆದಿದೆ‌.

ಗ್ರಾಮಕ್ಕೆ ನಿರಂತರ ವಿದ್ಯುತ್ ಪೂರೈಸುವ ಮುಖ್ಯ ವಿದ್ಯುತ್ ತಂತಿ ಇದಾಗಿದ್ದು ಅಪಾಯಕ್ಕೆ ಎಡೆಮಾಡಿಕೊಟ್ಟಿದೆ. ನಿರಂತರ ಮಳೆ ಕಾರಣ ರಾತ್ರಿ 9.30ಕ್ಕೆ ತಂತಿ ಕಟ್ ಆಗಿದೆ. ದನದ ಶೆಡ್ ಮೇಲೆ ಬಿದ್ದಿದ್ದು, ವಿದ್ಯುತ್ ಪ್ರವಹಿಸಿದೆ. ಮಳೆಯಾಗಿದ್ದರಿಂದ ಕುರಿ ಹಟ್ಟಿಗೂ ವಿದ್ಯುತ್ ಶಾಕ್ ತಗುಲಿದೆ. ಪರಿಣಾಮ 15 ಕುರಿ ಹಾಗೂ ಎರಡು ಎತ್ತು ಸತ್ತಿವೆ.

ಕನಕಪ್ಪ ಹಾಗೂ ಹುಲುಗಪ್ಪ ಗೊಲ್ಲರ್ ಗೆ ಸೇರಿದ ಕುರಿಗಳಾಗಿವೆ. ಯಂಕಪ್ಪ ದಾಸರ್ ಎಂಬುವವರ ಎತ್ತುಗಳು ಸ್ಥಳದಲ್ಲೇ ಮೃತಪಟ್ಟಿದ್ದು, ರೈತರು ಕಣ್ಣೀರು ಹಾಕುವಂತಾಗಿದೆ. ಲಕ್ಷಾಂತರ ರೂ. ಮೌಲ್ಯದ ಜಾನುವಾರು ಸಾವನ್ನಪ್ಪಿದ್ದು ಮಾಲೀಕರು ವ್ಯಥೆ ಪಡುವಂತಾಗಿದೆ.

ಮಳೆಗೆ ಭೂಮಿ ತಂಪಾಗಿದ್ದರಿಂದ ನಿವಾಸಿಗಳಿಗೂ ಕರೆಂಟ್ ಶಾಕ್ ಅನುಭವವಾಗಿದೆ. ಅದೃಷ್ಟವಶಾತ್ ತಂತಿ ಬಿದ್ದಾಗ ಗ್ರಾಮಸ್ಥರು ಎಚ್ಚರ ವಹಿಸಿ ದೂರ ಓಡಿದ್ದಾರೆ. ಇದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗ್ರಾಮದ ಆಂಜನೇಯ ದೇವಸ್ಥಾನ ಪಕ್ಕದಲ್ಲಿದ್ದು, ಪೂಜಾರಿ ಪ್ಲಾಸ್ಟಿಕ್ ಬ್ಯಾರಲ್ ಮೇಲೆ ಹತ್ತಿ ಕುಳಿತು ಪ್ರಾಣ ಉಳಿಸಿಕೊಂಡಿದ್ದಾರೆ. ಸ್ಥಳಕ್ಕೆ ಜೆಸ್ಕಾಂ ಅಧಿಕಾರಿಗಳಾದ ಆನಂದ, ಲೈನ್ ಮನ್ ನರಸಿಂಹ ತೆರಳಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net