

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ
ನಗರದ ಜೋಗಿಮಟ್ಟಿ ವನ್ಯಜೀವಿಧಾಮದ ಆಡು ಮಲ್ಲೇಶ್ವರ ಕಿರು ಮೃಗಾಲಯದಲ್ಲಿ ಬುಧವಾರ ಎರಡು ವರ್ಷದ ಭೂಮಿ ಹಾಗೂ ಭಾನು ಹೆಸರಿನ ಅವಳಿ ಕರಡಿ ಮರಿಗಳ ಜನ್ಮದಿನ ಆಚರಿಸಲು ಮೃಗಾಲಯದ ಅಧಿಕಾರಿ, ಸಿಬ್ಬಂದಿ ಸಜ್ಜಾಗಿದ್ದಾರೆ.
ನಿಖಿಲ್ ಹಾಗೂ ಸೀನಮ್ಮ ಎಂಬ ಹೆಸರಿನ ಕರಡಿಗಳಿಗೆ ಇವು ಅವಳಿ ಮರಿಗಳಾಗಿ ಜನಿಸಿವೆ. ಅಂದಾಜು 30 ವರ್ಷ ವಯಸ್ಸಿನ ಲಕ್ಷ್ಮೀ ಎಂಬ ಅಜ್ಜಿ ಕರಡಿ ಯಜಮಾನಿಯಾಗಿದೆ. ಇದಿ ಮೃಗಾಲಯ ಸ್ಥಾಪನೆಯಾದ 1987ರಿಂದಲೂ ಇದೆ ಎನ್ನುವುದು ಅಧಿಕಾರಿಗಳ ಮಾಹಿತಿ.
ಮೃಗಾಲಯದಲ್ಲಿ ಸೂರ್ಯ ಮತ್ತು ನಿಶಾ ಹೆಸರಿನ ಎರಡು ಹುಲಿಗಳು ಮೈಸೂರು ಮೃಗಾಲಯದಿಂದ ಬಂದಿವೆ. ಐದು ಚಿರತೆಗಳು, 13 ಜಿಂಕೆಗಳು,7 ಕೃಷ್ಣಮೃಗ, 2 ಮೊಸಳೆ, ನೀಲ್‌ಗಾಯಿ, ನಕ್ಷತ್ರ ಆಮೆ, ಕಲ್ಲಾಮೆ, ಬಡ್ಜ್‌ರಿಗರ್ಸ್, ಹೆಬ್ಬಾವು, ನವಿಲು, ಎಮು, ಎಲ್ಲೋ ಗೋಲ್ಡನ್‌ಫಿಸೆಂಟ್, ಸಿಲ್ವರ್ ಫಿಸೆಂಟ್, ರೋಸ್ ರಿಂಗ್ಡ್ ಪ್ಯಾರಕೀಟ್, ಲವ್‌ಬರ್ಡ್ಸ್ ಇತ್ಯಾದಿ 137ಕ್ಕೂ ಹೆಚ್ಚು ಪ್ರಾಣಿ-ಪಕ್ಷಿಗಳಿವೆ.
ಹೆಚ್ಚುತ್ತಿರುವ ಆದಾಯ: ಮೃಗಾಲಯದ ಆದಾಯ ಈಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ನಿತ್ಯ ಅಂದಾಜು 30 ಸಾವಿರ ರೂ. ಆದಾಯವಿದೆ. ವಾರಾಂತ್ಯ ಮತ್ತು ರಜಾದಿನಗಳಲ್ಲಿ 50-60 ಸಾವಿರ ರೂ. ವರೆಗೂ ತಲುಪುತ್ತದೆ. ವಾರಾಂತ್ಯ ನಗರದಿಂದ ಮೃಗಾಲಯಕ್ಕೆ ಒಂದು ಕೆಎಸ್‌ಆರ್‌ಟಿಸಿ ಬಸ್ ಓಡಾಟಕ್ಕೆ ನಿಗಮ ಸಮ್ಮತಿಸಿದೆ.
ಬಾಕ್ಸ್...
ಹೊಸ ಕೇಜ್‌ಗಳಿಗೆ ಪ್ರಸ್ತಾವನೆ
ವಿವಿಧ ಅಭಿವೃದ್ಧಿ ಕಾಮಗಾರಿಗಳೊಂದಿಗೆ ಮೃಗಾಲಯ ವೀಕ್ಷಕರು, ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದರಿಂದಾಗಿ ಪ್ರಾಣಿ, ಪಕ್ಷಿಗಳನ್ನು ಹೊಸ ಕೇಜ್‌ಗಳಲ್ಲಿ ವೀಕ್ಷಿಸಲು ಸಾಧ್ಯವಾಗಿದೆ.
ಕೆಎಂಇಆರ್‌ಸಿ ನಿಧಿಯಡಿ ಜಿಚ್ಟ,ಟ್ಟಜಿಞಠಿಛಿ ಹಾಗೂ ಹಾವು ಮೊದಲಾದ ಪ್ರಾಣಿ, ಪಕ್ಷಿಗಳಿಗೆ ಇನ್ನಷ್ಟು ಹೊಸ ಕೇಜ್‌ಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಡಿಎಂಎಫ್ ನಿಧಿಯಡಿ ನೀರಿನ ಟ್ಯಾಂಕ್ ಮತ್ತು ಸಂಪು ನಿರ್ಮಿಸಲಾಗುತ್ತಿದೆ. ಐದು ಕೊಳವೆ ಬಾವಿಗಳನ್ನು ಕೊರೆಸಲಾಗಿದೆ.
ಮೃಗಾಲಯಕ್ಕೆ ನಿತ್ಯ 50 ಸಾವಿರ ಲೀಟರ್ ನೀರಿನ ಅಗತ್ಯವಿದೆ. ಸಮೀಪದ ಕೆರೆಯಿಂದ ನೀರು ಪೂರೈಕೆಯಾದರೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ. ಪ್ರಾಣಿ ಪಕ್ಷಿ ದತ್ತು ಯೋಜನೆ ಚುರುಕುಗೊಳಿಸುವ ನಿಟ್ಟಿನಲ್ಲಿ ಅರಣ್ಯಾಧಿಕಾರಿಗಳು ವಿವಿಧ ಇಲಾಖೆ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಪತ್ರ ಕೊಡುತ್ತಿದ್ದಾರೆ.
---
ಚರ್ಚಿಸುತ್ತೇನೆ
ಪ್ರಾಣಿಗಳ ದತ್ತು ಯೋಜನೆಗೆ ಸಾಕಷ್ಟು ಹಣ ಬೇಕೆಂಬ ಆತಂಕವಿಲ್ಲ, ನಮ್ಮ ಜಿಲ್ಲೆಯಲ್ಲೇ ಸಾಕಷ್ಟು ದಾನಿಗಳಿದ್ದಾರೆ. ವರ್ತಕರು, ಉದ್ದಿಮೆದಾರರು, ಲೀಡರ್ಸ್‌ಗಳಿಗೆ ಮನವರಿಕೆ ಮಾಡುವ ಯೋಜನೆ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಬುಧವಾರವೇ ಚರ್ಚಿಸುತ್ತೇನೆ. ಈ ಸಂದರ್ಭದಲ್ಲಿ ಮೃಗಾಲಯದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕುರಿತು ಆಲೋಚಿಸಲಾಗುವುದು.
ಕೆ.ಸಿ.ವೀರೇಂದ್ರಪಪ್ಪಿ, ಎಂಎಲ್‌ಎ ಹಾಗೂ ವನ್ಯಜೀವಿ ರಾಯಭಾರಿ, ಚಿತ್ರದುರ್ಗ.
----
ಮಾಹಿತಿ ನೀಡಲಾಗುವುದು
ಕರಡಿಗಳ ಜನ್ಮ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಚಾಕೋಲೆಟ್, ಸಸ್ಯಹಾರಿ ಪ್ರಾಣಿಗಳಿಗೆ ಹಣ್ಣುಗಳನ್ನು ಕೊಡುವುದರೊಂದಿಗೆ ಕರಡಿಗಳ ಕುರಿತು ಮಕ್ಕಳಿಗೆ ಮಾಹಿತಿ ನೀಡಲಾಗುವುದು.
ಅಕ್ಷತಾ, ಮೃಗಾಲಯ, ಆರ್‌ಎಫ್‌ಒ.
-----