ಕರಡಿ ದಾಳಿ ರೈತನಿಗೆ ಗಂಭೀರ ಗಾಯ

ಕರಡಿ ದಾಳಿ ರೈತನಿಗೆ ಗಂಭೀರ ಗಾಯ
Published on

ಅರಸೀಕೆರೆ : ತಾಲೂಕಿನ ಅಗ್ಗುಂದ ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಕರಡಿ ದಾಳಿ ನಡೆಸಿದ್ದು ರೈತ ಪುಟ್ಟಸ್ವಾಮಯ್ಯ ಗಂಭೀರ ಗಾಯಗೊಂಡಿದ್ದಾರೆ.

ಕೃಷಿ ಜಮೀನಿಗೆ ಕೆಲಸಕ್ಕೆ ತರಳಿದ್ದ ವೇಳೆ ನಡೆದ ಏಕಾಏಕಿ ದಾಳಿಯಿಂದ ಕಕ್ಕಾಬಿಕ್ಕಿಯಾಗಿದ್ದು ರಕ್ಷಣೆಗೆ ಚೀರಾಟ ನಡೆಸಿದ್ದಾರೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಸುತ್ತಮುತ್ತಲ ಕೃಷಿಕರು ಕರಡಿಯನ್ನು ಬೆದರಿಸಿದ್ದು ಅಲ್ಲಿಂದ ಕಾಲ್ಕಿತ್ತಿದೆ. ತಲೆ, ಬೆನ್ನು, ಮುಖ, ತೋಳು ಸೇರಿ ಹಲವೆಡೆ ಕಚ್ಚಿ ಗಾಯಗೊಳಿಸಿದ್ದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳುವನ್ನು ನಗರದ ಸರ್ಕಾರಿ ಜೆ.ಸಿ.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಅರಣ್ಯಾಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಗಾಯಾಳುವಿಗೆ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.


ಆಕ್ರೋಶ : ತಾಲೂಕಿನ ಕಸಬಾ ಹೋಬಳಿ ಸೇರಿ ವಿವಿಧೆಡೆ ಪದೇ ಪದೆ ಕರಡಿ ದಾಳಿ ನಡೆಯುತ್ತಿದ್ದರೂ ಸರ್ಕಾರ ಗಂಭೀರ ಕ್ರಮ ಕೈಗೊಂಡಿಲ್ಲ.ಕರಡಿಧಾಮ ಘೋಷಣೆಯೂ ಮರೀಚಿಕೆಯಾಗಿದ್ದು ಅಮಾಯಕರು ಅಂಗಾಗಳ ಜತೆಗೆ ಜೀವ ಕಳೆದುಕೊಳ್ಳುವಂತಾಗಿದೆ.ತಾಲೂಕು ಹಾಗೂ ಜಿಲ್ಲಾಡಳಿತ ಇನ್ನಾದರೂ ಇತ್ತ ಗಮನಹರಿಸಿ ಜನರ ಪ್ರಾಣ ರಕ್ಷಣೆಗೆ ಮುಂದಾಗಬೇಕು. ಇಲ್ಲದಿದ್ದಲ್ಲಿ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಗ್ರಾಮದ ಡಿಎಸ್‌ಎಸ್ ಮುಖಂಡ ಎ.ಪಿ.ಚಂದ್ರಯ್ಯ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net