

ಕೊಳ್ಳೇಗಾಲ: ಪಟ್ಟಣದ ಶ್ರೀಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜು ಕ್ರೀಡಾಕೂಟದಲ್ಲಿ ಪಟ್ಟಣದ ಕಾರ್ನರ್‌ಸ್ಟೋನ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ.
ಬಾಲಕಿಯರ ಬಾಸ್ಕೆಟ್ ಬಾಲ್ ಪಂದ್ಯದಲ್ಲಿ ಸಂಜನಾ ಹಾಗೂ ತಂಡ ಪ್ರಥಮ, ಬಾಲಕಿಯರ ಖೋ ಖೋ ಪಂದ್ಯದಲ್ಲಿ ಕವಿತಾ ಮತ್ತು ತಂಡ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಬಾಲಕಿಯರ ಟೆನಿಸ್ ಸ್ಪರ್ಧೆಯಲ್ಲಿ ಮೌನಾ ಹಾಗೂ ದರ್ಶಿನಿ ಪ್ರಥಮ , 3000ಮೀ.ಓಟದಲ್ಲಿ ಕವಿತಾ ಪ್ರಥಮ ಹಾಗೂ ಮೇಘಲಾ ದ್ವಿತೀಯ, 800ಮೀ ಓಟದಲ್ಲಿ ವಿಜಯಲಕ್ಷ್ಮೀ, ಸ್ಟೀಫನ್ ದ್ವಿತೀಯ, 400 ಮೀ. ಬಾಲಕರ ಓಟದಲ್ಲಿ ಚಚೀಸ್ ರಾಜ್ ಹಾಗೂ ಬಾಲಕಿಯರ ಓಟದಲ್ಲಿ ವಿಜಯಲಕ್ಷ್ಮಿ ಪ್ರಥಮ ಸ್ಥಾನ ಗಳಿಸಿದ್ದಾರೆ. 1500 ಮೀ.ಓಟದಲ್ಲಿ ಮೇಘಲಾ ಪ್ರಥಮ ಹಾಗೂ ಕವಿತಾ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
100ಮೀ ಓಟದಲ್ಲಿ ಸುಷ್ಮಿತಾ ದ್ವಿತೀಯ, 200 ಮೀ.ಓಟದಲ್ಲಿ ಶಿವಾನಿ ದ್ವಿತೀಯ, 5000 ಮೀ.ಓಟದಲ್ಲಿ ರಿತನ್ ದ್ವಿತೀಯ, 800 ಮೀ.ಓಟದಲ್ಲಿ ಸಂಜು ತೃತೀಯ, ಬಾಲಕರ ಎತ್ತರ ಜಿಗಿತದಲ್ಲಿ ಸ್ಟೀಫನ್ ದ್ವಿತೀಯ, ಸತೀಶ್ ತೃತೀಯ, ಬಾಲಕಿಯರ ಎತ್ತರ ಜಿಗಿತದಲ್ಲಿ ಶಿವಾನಿ ತೃತೀಯ, ಬಾಲಕಿಯರ ಉದ್ದ ಜಿಗಿತದಲ್ಲಿ ಸುಷ್ಮಿತಾ ಪ್ರಥಮ ಹಾಗೂ ಜಯಶೀಲಾ ದ್ವಿತೀಯ, ಬಾಲಕರ ಉದ್ದ ಜಿಗಿತದಲ್ಲಿ ಸಂತೋಷ್ ದ್ವಿತೀಯ, ತ್ರಿವಿಧ ಜಿಗಿತದಲ್ಲಿ ಸುಷ್ಮಿತಾ ಪ್ರಥಮ ಹಾಗೂ ಶಿವಾನಿ ದ್ವಿತೀಯ, ಬಾಲಕಿಯರ ಗುಡ್ಡಗಾಡು ಓಟದಲ್ಲಿ ವಿಜಯಲಕ್ಷ್ಮೀ, ಸಂಜು, ವಂದನಾ ಗೆಲುವು ಸಾಧಿಸಿದ್ದಾರೆ. ಬಾಲಕರ ಗುಡ್ಡಗಾಡು ಓಟದಲ್ಲಿ ಸಂತೋಷ್ 4ನೇ ಸ್ಥಾನ, 4100 ರಿಲೇ ಓಟದಲ್ಲಿ ಸುಷ್ಮಿತಾ ಹಾಗೂ ತಂಡ ಪ್ರಥಮ , ಬಾಲಕರ 4400 ರಿಲೇ ಓಟದಲ್ಲಿ ಸ್ಟೀಫನ್ ಹಾಗೂ ತಂಡ ದ್ವಿತೀಯ, ಬಾಲಕಿಯರ 4*400 ರಿಲೇ ಓಟದಲ್ಲಿ ವಿಜಯಲಕ್ಷ್ಮೀ ಹಾಗೂ ತಂಡ ಪ್ರಥಮ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.
ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರೂಬೆನ್ ಮೋಸೆಸ್, ಛೇರ್ಮನ್ ಎನ್.ಮಹೇಶ್ , ಆಡಳಿತಾಧಿಕಾರಿ ಹಾಗೂ ಪ್ರಾಂಶುಪಾಲ ಡಾ.ರೋಷನ್ ಪ್ರಿನ್ಸ್ ಹಾಗೂ ಮ್ಯಾನೇಜಿಂಗ್ ಟ್ರಸ್ಟಿಯಾದ ಕೆ.ಎನ್.ಪವನ್ ಕ್ರೀಡಾ ಸಂಚಾಲಕ ಆಲ್ವಿನ್ ಪ್ರಶಾಂತ್ ಅಭಿನಂದಿಸಿದ್ದಾರೆ.