ಕಾರ್ಖಾನೆ ಉಳಿವಿಗೆ ದೇಸಾಯಿ ಬಣ ಬೆಂಬಲಿಸಿ

nadi sugars
ಚಿಕ್ಕಗಲಗಲಿ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆ ಬಹಿರಂಗ ಸಭೆಯಲ್ಲಿ ಶಾಸಕ ಜೆ.ಟಿ.ಪಾಟೀಲ ಮಾತನಾಡಿದರು. ಕುಮಾರ ದೇಸಾಯಿ, ಅದೃಶ್ಯಪ್ಪ ದೇಸಾಯಿ ಇದ್ದಾರೆ.
Published on

ಬೀಳಗಿ: ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಉಳಿವಿಗೆ ಮತ್ತು ಅಭಿವೃದ್ಧಿಗೆ ಎಲ್ಲರೂ ಜಾತ್ಯತೀತ, ಪಕ್ಷಾತೀತವಾಗಿ ಬೆಂಬಲ ನೀಡುವ ಮೂಲಕ ಜೈನಾಪುರ ಕುಮಾರ ದೇಸಾಯಿ ನೇತೃತ್ವದ ಪೆನಲ್‌ಗೆ ಕಬ್ಬು ಬೆಳೆಗಾರ ಷೇರುದಾರರು ಮತದಾನ ಮಾಡುವ ಮೂಲಕ ಆಶೀರ್ವಾದ ಮಾಡಬೇಕು ಎಂದು ಶಾಸಕ ಜೆ.ಟಿ.ಪಾಟೀಲ ಮನವಿ ಮಾಡಿದರು.

ಗಲಗಲಿ ಸಮಿಪದ ಚಿಕ್ಕಗಲಗಲಿ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಈಗಿರುವ ಆಡಳಿತ ಮಂಡಳಿಯವರು ಕಾರ್ಖಾನೆ ಅಭಿವೃದ್ಧಿಗೆ ಶ್ರಮಿಸಿಲ್ಲ. ರೈತರಿಗೆ ಸರಿಯಾಗಿ ಬಿಲ್ ನೀಡಿಲ್ಲ. ಕಾರ್ಖಾನೆ ಉಳಿವಿಗೆ ಮತ್ತು ಅದರ ಅಭಿವೃದ್ಧಿಗೆ ಕುಮಾರ ದೇಸಾಯಿ ಅವರ ಪೆನಲ್‌ಗೆ ಮತದಾನ ಮಾಡಬೇಕು. ಕಾರ್ಖಾನೆ ಪುನರುಜ್ಜೀವನಕ್ಕೆ ನಾವೆಲ್ಲರೂ ಬದ್ಧರಾಗೋಣ ಎಂದರು.
ಜೈನಾಪುರ ಕುಮಾರ ದೇಸಾಯಿ, ಮುತ್ತು (ಅದೃಶ್ಯಪ್ಪ) ವಾಸಣ್ಣ ದೇಸಾಯಿ, ಈರಣಗೌಡ ನ್ಯಾಮಗೌಡರ, ಹನುಮಂತಗೌಡ ಕೋರಡ್ಡಿ, ದೊಡ್ಡಣ್ಣ ದೇಸಾಯಿ, ಸೋಮನಗೌಡ ಪಾಟೀಲ, ಶಂಕರ ಗೌಡ ನ್ಯಾಮಗೌಡರ, ವೆಂಕಟೇಶ ನಾಯಕ, ಜಿಪಂ ಮಾಜಿ ಸದಸ್ಯ ಮುಗಿಯಪ್ಪ ದೇವನಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net