ಕರಕುಶಲ ವಸ್ತು ಕ್ರಾಫ್ಟ್ ಎಕ್ಸ್ಪೋ ಆ.೧೨ ಕೊನೇ ದಿನ

0706KLB10
Published on

ಕಲಬುರಗಿ: ನಗರದ ಶ್ರೀ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ನ್ಯೂ ಇಂಡಿಯನ್ ಕ್ರಾಫ್ಟ್ ಎಕ್ಸ್ಪೋ ಆರಂಭವಾಗಿದ್ದು, ಗ್ರಾಹಕರ ದಂಡೇ ಹರಿದು ಬರುತ್ತಿದ್ದು, ಆ.೧೨ರವರೆಗೆ ನಡೆಯಲಿದೆ. ದೇಶದ ೧೦೦ಕ್ಕೂ ಹೆಚ್ಚು ಮಳಿಗೆದಾರರು ಭಾಗವಹಿಸಿದ್ದಾರೆ. ವಿವಿಧ ರಾಜ್ಯದ ಕುಶಲಕರ್ಮಿಗಳು ತಯಾರಿಸಿದ ಕರಕುಶಲ ವಸ್ತುಗಳು ಕೈಗೆಟಕುವ ಬೆಲೆಯಲ್ಲಿ ದೊರೆಯುತ್ತಿವೆ.
ಕರಕುಶಲ ಉಡುಗೊರೆ, ಉತ್ಪನ್ನ, ಆಭರಣ, ಟೆರಾಕೋಟ ಗೃಹಲಂಕಾರಿಕೆಗಳು, ತುಳಸಿ ಸ್ಟಾö್ಯಂಡ್, ಹೂವಿನ ಕುಂಡ, ಕಾರಂಜಿ, ತಬಲಾ ಸ್ಟಾö್ಯಂಡ್, ವಾಲï ಹ್ಯಾಂಗಿAಗ್ ಸೇರಿ ಆಕರ್ಷಕ ವಸ್ತುಗಳು ದೊರೆಯುತ್ತಿವೆ. ಎಲ್ಲ ವಸ್ತುಗಳ ಮೇಲೆ ಶೇ.೨೫ರವರೆಗೆ ರಿಯಾಯಿತಿ ಇದೆ. ಲೈಟ್‌ವೇಟ್ ಡಿನ್ನರ್ ಸೆಟ್, ಬೋನ್ ಚೈನಾ, ಕಪ್, ಉತ್ತರ ಪ್ರದೇಶದ ಖುರ್ಜಾ ಕ್ರಾÈಕರ್‌ಗಳು ಶೇ.೨೦ ರಿಯಾಯಿತಿಯಲ್ಲಿವೆ.
ಕಾಶ್ಮೀರಿ ರೇಷ್ಮೆ ಕಾರ್ಪೆಟ್, ಹೂರ್ ಕಾರ್ಪೆಟ್, ಕಂಬಳಿಗಳು, ಆಸ್ಟೆçÃಲೆಯಾ, ಇರಾನ್ ಕಾರ್ಪೆಟ್, ಪರ್ಷಿಯನ್ ಕಾರ್ಪೆಟ್, ಮೆರಿನೋ ಉಣ್ಣೆ ಕಾರ್ಪೆಟ್ ದೊರೆಯುತ್ತಿವೆ. ಮಿರ್ಜಾಪುರ ೩ಡಿ ಕಾರ್ಪೇಟ್ ಲಭ್ಯವಿದೆ.
ಫ್ಯಾಷನï ಫಿಯೆಸ್ಟಾ ಸ್ಟಾಲ್‌ನಲ್ಲಿ ಬಾಂಬೆ ಫ್ಯಾನ್ಸಿ ಕುರ್ತಿ, ದೆಹಲಿ ಫ್ಯಾನ್ಸಿ, ನೈರಾ ಕಟ್ ಡ್ರೆಸ್, ಕರಾಚಿ ಕುರ್ತಿಸ್, ಲೆಗ್ಗಿಂಗ್ಸ್, ಪಲಾಝೋ, ಖಾದಿ ಅಂಗಿ, ಕುರ್ತಾ, ಪೈಜಾಮ, ಜಾಕೆಟ್, ಪ್ಯಾಂಟ್ ಜತೆಗೆ ಲಕ್ನೋವಿ ಚಿಕನ್, ಕಸೂತಿ ಸೂಟ್, ಜಾರ್ಜೆಟ್, ಶಿಫಾನ್, ರೆಯಾನ್ ಕಾಟನ್, ಮಸ್ಲಿನ್, ಮುದಲ್ ಬಟ್ಟೆಗಳು, ಸೀರೆಗಳು ದೊರೆಯುತ್ತವೆ.
ಬಿಯರ್ ಬಾರ್ ಸೆಲ್ಫ್, ಡೈನಿಂಗ್ ಟೇಬಲ್, ಸಿಂಗಾಪುರ್ ಸೋಫಾ ಸೆಟ್, ಬೆಡ್, ಐರನ್ ದಿವಾನ್, ಸೋಫಾ, ಮಂಚ, ಪಂಜಾಬಿ,ರಾಜಸ್ಥಾನಿ ಪೈಪ್, ಗಿಡಮೂಲಿಕೆ, ಹೋಮವೇರ್ ಪುಸ್ತಕ, ಕಿಚನ್ ಪಾತ್ರೆ, ರಾಜಸ್ಥಾನಿ ಉಪ್ಪಿನಕಾಯಿ, ಲ್ಯಾಕ್ ಬಳೆ, ಮಕ್ಕಳ ಟೀ ಶರ್ಟ್, ಜೈಪುರ ಟೀ ಶರ್ಟ್, ಚರ್ಮದ ವಸ್ತು, ಬೆಡ್‌ಶೀಟ್, ಮರದ ಕೆತ್ತನೆ, ಲೋಹದ ಕರಕುಶಲ, ಲ್ಯಾಡ್ ಕ್ರಾಫ್ಟ್ ಗೌನ್, ಕ್ರಾö್ಯಕರಿ, ಚನ್ನಪಟ್ಟಣದ ಆಟಿಕೆ, ಸೌಂದರ್ಯವರ್ಧಕಗಳು ದೊರೆಯುತ್ತಿವೆ. ಪಾಪಡ್, ಚಟ್ನಿ, ದೊರೆಯುತ್ತವೆ. ಪ್ರವೇಶ ಮತ್ತು ಪಾರ್ಕಿಂಗ್ ಉಚಿತ ಎಂದು ಸಂಘಟಕ ಅಶುತೋಷ ಶರ್ಮಾ ಮತ್ತು ಪ್ರಕಾಶ ಕಲ್ಕುಂದ್ರಿಕರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net