ಹಾಸನ: ನಗರದ ಸಾಲಗಾಮೆ ರಸ್ತೆಯ ನಿವಾಸಿ ಕಮಲಮ್ಮ ಎಂಬವರು ಗುರುವಾರ ಹಳೇಬೀಡು ಗ್ರಾಮದ ದ್ವಾರಸಮುದ್ರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗುರುವಾರ ಸಂಜೆ ವೇಳೆಗೆ ದ್ವಾರಸಮುದ್ರ ಕೆರೆಯಲ್ಲಿ ಬೋಟಿಂಗ್ ನಡೆಸುತ್ತಿದ್ದ ದೋಣಿ ಚಾಲಕ ಕುಮಾರ್ ಎಂಬವರು ನೀರಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಮಹಿಳೆಯನ್ನು ಗಮನಿಸಿ ರಕ್ಷಣೆಗೆ ಮುಂದಾಗಿದ್ದಾರೆ.ವೃದ್ಧೆಯ ಸಮೀಪ ತೆರಳಿ ಮೇಲೆತ್ತುವಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಸ್ಥಳಕ್ಕೆ ಬಂದಿದ್ದ ಹಳೇಬೀಡು ಪೊಲೀಸರು ಪರಿಶೀಲಿಸಿದಾಗ ಅಜ್ಜಿಯ ರವಿಕೆಯ ಒಳಭಾಗದಲ್ಲಿದ್ದ ಪರ್ಸ್‌ನಲ್ಲಿ ಪ್ರತಿಭಾ ಹಾಗೂ ಮಂಜು ಎಂದು ಬರೆದಿದ್ದ ಚೀಟಿ ದೊರೆತಿದೆ. ಇವರಿಬ್ಬರು ನನ್ನನ್ನು ಕೂಡಿ ಹಾಕಿ ಊಟ ತಿಂಡಿ ಕೊಡದೆ ಸತಾಯಿಸಿದ್ದಾರೆ. ನನ್ನ ಸಾವಿಗೆ ಅವರೇ ಕಾರಣರು ಎಂದು ಬರೆದಿರುವ ಡೆತ್ ನೋಟ್ ಸಿಕ್ಕಿದೆ.
ಮಾಹಿತಿ ಅನುಸಾರ ಪ್ರಕರಣ ದಾಲಿಸಿರುವ ಹಳೇಬೀಡು ಪೊಲೀಸರು ಸಂಬಂಧಪಟ್ಟವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.