ಕರಂದ್ಲಾಜೆಗೆ ಮಿದುಳು ಇಲ್ಲ

timmapur
Published on

ಚಿತ್ರದುರ್ಗ: ಜನರಿಗೆ 600ಕ್ಕೂ ಅಧಿಕ ಭರವಸೆ ನೀಡಿ, 50 ಪೂರೈಸಲಾಗದ ಬಿಜೆಪಿ ವಚನಭ್ರಷ್ಟ, ಜನವಿರೋಧಿ ಪಕ್ಷ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಕಿಡಿಕಾರಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ತಿಂಗಳೊಳಗೆ ಕೆಲ ಗ್ಯಾರಂಟಿ ಈಡೇರಿಸಿದ್ದೇವೆ. ಇದನ್ನು ಸಹಿಸಿಕೊಳ್ಳಲು ವಿರೋಧ ಪಕ್ಷದವರಿಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮಿದುಳು ಇಲ್ಲವೆನ್ನುವ ಮೂಲಕ ಗ್ಯಾರಂಟಿ ಘೋಷಣೆಗೂ ಮುನ್ನ ಮಿದುಳಿರಲಿಲ್ವಾ ಎಂಬ ಅವರ ಹೇಳಿಕೆಗೆ ತಿರುಗೇಟು ನೀಡಿದರು.

ಕಮಲಪಡೆಯಲ್ಲಿ ಸ್ಕಾೃಮ್‌ಗಳಿವೆ. ಕಾಂಗ್ರೆಸ್‌ನಲ್ಲಿ ಏನಿದ್ದರೂ ಜನಪರ ಸ್ಕೀಮ್‌ಗಳು ಮಾತ್ರ. ರಾಜ್ಯ ಸರ್ಕಾರದ ಕುರಿತು ಮಾತನಾಡುವ ಯೋಗ್ಯತೆ ಬಿಜೆಪಿಗರಿಗಿಲ್ಲ ಎಂದು ಕಾಂಗ್ರೆಸ್ ಸ್ಕಾೃಮ್‌ಗಳ ಸರ್ಕಾರವೆಂದ ಮಾಜಿ ಶಾಸಕ ಸಿ.ಟಿ.ರವಿ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬಡವರ ಕಷ್ಟಗಳ ಅರಿವಿಲ್ಲ ಎನಿಸುತ್ತಿದೆ. ಇದ್ದಿದ್ದರೆ, ಕೇಂದ್ರದ ವಿರುದ್ಧ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ವಿರೋಧಿಸುತ್ತಿರಲಿಲ ಎಂದರು. ಅಬಕಾರಿ ಇಲಾಖೆಯಲ್ಲಿ ಈವರೆಗೂ ಒಂದೂ ವರ್ಗಾವಣೆಯಾಗಿಲ್ಲ. ಇದರಲ್ಲಿ ದಂಧೆ ಆಗುತ್ತಿದೆ ಎಂಬುದೇ ಅಪ್ರಸ್ತುತ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net