ಕರ ವಸೂಲಾತಿ ಹೆಚ್ಚಿನ ಪ್ರಗತಿ ಸಾಧಿಸಿ

bdr6
ಕಮಲನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ತಾಪಂ ಇಒ ಮಾಣಿಕರಾವ ಪಾಟೀಲ್, ನೋಡಲ್ ಅಧಿಕಾರಿ ಶ್ರೀನಿವಾಸ, ಎಡಿ ಹಣಮಂತರಾಯ ಕೌಟಗೆ ಇದ್ದರು.
Published on

ಕಮಲನಗರ: ಕರ ವಸೂಲಾತಿ ಕಡಿಮೆ ಇರುವ ಗ್ರಾಮ ಪಂಚಾಯಿತಿಗಳು ಹೆಚ್ಚಿನ ಪ್ರಗತಿ ಸಾಧಿಸಬೇಕೆಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ್ ಸೂಚಿಸಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ ಅವರು, ಕರ ವಸೂಲಾತಿ ಜತೆಗೆ ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸಲು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕೆಂದು ಪಿಡಿಒ ಅವರಿಗೆ ತಿಳಿಸಿದರು.

ಗ್ರಂಥಾಲಯಗಳು ಇರುವ ಎಲ್ಲ ಗ್ರಾಪಂಗಳಲ್ಲಿ ಇಂಟರ್ನೆಟ್, ಇನವೇಟರ್ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. 15ನೇ ಹಣಕಾಸಿನಲ್ಲಿ ಯಾವ ಕಾಮಗಾರಿಗೆ ಅನುದಾನ ಕಾಯ್ದಿರಿಸಿದೆಯೋ ಅದೇ ಕಾಮಗಾರಿಗಳಿಗೆ ಉಪಯೋಗಿಸಬೇಕು. ಬಯೋಮೇಟ್ರಿಕ್ ಹಾಜರಾತಿ ಪ್ರತಿಶತವಾಗಬೇಕು. ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆಯನ್ನು ಈಗಾಗಲೇ ಎನ್‌ಆರ್‌ಎಲ್‌ಎಂ ಸಂಘದವರು ಮಾಡುತ್ತಿದ್ದು, ಅದರ ಮೇಲ್ವಿಚಾರಣೆ ಪಿಡಿಒಗಳು ಮಾಡಬೇಕು ಎಂದು ಪಾಟೀಲ್ ಹೇಳಿದರು.

ತಾಲೂಕು ನೋಡಲ್ ಅಧಿಕಾರಿ ಶ್ರೀನಿವಾಸ ಮಾತನಾಡಿ, ಕೆಲವು ಗ್ರಾಪಂ ವ್ಯಾಪ್ತಿಯಲ್ಲಿ ಮನೆಗಳನ್ನು ಕಟ್ಟಲು ಇನ್ನು ಪ್ರಾರಂಭಿಸಿಲ್ಲ. ಈಗಾಗಲೇ ಒಂದು ಕಂತಿನ ಹಣ ಜಮಾ ಆಗಿದೆ. ಆದರೂ ಕಾಮಗಾರಿ ಆರಂಭಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸಭೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ, ಸ್ವಚ್ಚ ಭಾರತ ಮಿಷನ್, ಕುಡಿಯುವ ನೀರು ಮತ್ತು ನೈರ್ಮಲ್ಯ ಸೇರಿ ಬೂದು ನೀರು ನಿರ್ವಹಣೆ, ವೈಯಕ್ತಿಕ ಶೌಚಗೃಹ, ಗ್ರಾಮ ಆರೋಗ್ಯ ಅಭಿಯಾನ ಕುರಿತು ಚರ್ಚಿಸಲಾಯಿತು.

ತಾಪಂ ಸಹಾಯಕ ನಿರ್ದೇಶಕ ಹಣಮಂತರಾಯ ಕೌಟಗೆ, ಪಿಡಿಒಗಳಾದ ರಾಜಕುಮಾರ ತಂಬಾಕೆ, ಮಲ್ಲೇಶ ಮಾರುತಿ, ದತ್ತಾತ್ರೇಯ ಪೂಜಾರಿ, ಬಾಬುರಾವ ಸಂಗಮಕರ್, ಪ್ರಶಾಂತ ಸುತಾರ, ಪ್ರಭುದಾಸ ಜಾಧವ್, ನಿರ್ಮಲಾ, ಸಂಗೀತಾ ದೇಶಮುಖ, ತಾನಾಜಿ ಪಾಟೀಲ್, ವಿಜಯಕುಮಾರ ಪಾಟೀಲ್, ಸೋಮಶೇಖರ್, ಮನೋಹರ, ಎಸ್, ದೇಶಪಾಂಡೆ, ರಾಮದಾಸ, ತಾಪಂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net