ಕರ ನಿರಾಕರಣೆಗೆ ಒತ್ತಾಯಿಸಿ ಸೆಸ್ಕ್ ಸಿಬ್ಬಂದಿಗೆ ದಿಗ್ಬಂಧನ

20 yelandur 01
Published on

ಚಾಮರಾಜನಗರ: ಯಳಂದೂರು ತಾಲೂಕಿನ ಮೆಳ್ಳಹಳ್ಳಿ ಗ್ರಾಮದಲ್ಲಿ ವಿದ್ಯುತ್ ಬಿಲ್‌ನ್ನು ಕಟ್ಟಿ ಎಂದು ಒತ್ತಾಯಿಸಿದ ಸೆಸ್ಕ್‌ನ ಸಿಬ್ಬಂದಿಯನ್ನು ರೈತ ಸಂಘದ ಸದಸ್ಯರು ಬುಧವಾರ ದಿಗ್ಬಂಧನ ಮಾಡಿ ಗ್ರಾಮದಿಂದ ವಾಪಸ್ ಕಳುಹಿಸಿರುವ ಘಟನೆ ನಡೆದಿದೆ.

ಕಳೆದ ಹಲವು ವರ್ಷಗಳಿಂದಲೂ ವಿದ್ಯುತ್ ಕರ ನಿರಾಕರಣೆ ಚಳುವಳಿ ಮಾಡಿಕೊಂಡು ಬಂದಿರುವ ಹೊನ್ನೂರು, ಮೆಳ್ಳಹಳ್ಳಿ, ದುಗ್ಗಹಟ್ಟಿ ಸೇರಿದಂತೆ ಕೆಲವು ಗ್ರಾಮಗಳ ಹಳೆಯ ವಿದ್ಯುತ್ ಬಿಲ್‌ನ್ನು ಮನ್ನಾ ಮಾಡಬೇಕು ಎಂದು ಹಲವು ವರ್ಷಗಳಿಂದ ಹೋರಾಟ ಮಾಡಲಾಗುತ್ತಿತ್ತು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ವಿದ್ಯುತ್ ಬಿಲ್ ಮನ್ನಾ ಮಾಡಿಸುವುದಾಗಿ ಭರವಸೆ ನೀಡಿದ್ದರು.

ಆದರೂ ಕೂಡ ಸೆಸ್ಕ್‌ನ ಸಿಬ್ಬಂದಿ ಮನೆ-ಮನೆಗಳಿಗೆ ತೆರಳಿ ಬಿಲ್‌ನ್ನು ಪಾವತಿ ಮಾಡುವಂತೆ ಪೀಡಿಸುತ್ತಿದ್ದಾರೆ. ನಮ್ಮ ಮೀಟರ್‌ನ ಹಳೆ ರೀಡಿಂಗ್‌ಗೆ ನಾವು ಬಿಲ್ ಪಾವತಿ ಮಾಡುವುದಿಲ್ಲ. ಇದನ್ನು ಸಂಬಂಧಪಟ್ಟ ಇಲಾಖೆ ಶೂನ್ಯ ಮಾಡಬೇಕು. ಆಗ ನಾವು ಬಿಲ್ ಕಟ್ಟುತ್ತೇವೆ ಎಂದು ಸೆಸ್ಕ್‌ನ ನೌಕರರಿಗೆ ಗ್ರಾಮದ ದೇಗುಲದ ಬಳಿ ದಿಗ್ಬಂಧನ ಹಾಕಿ ವಾಪಸ್ ಕಳುಹಿಸಲಾಗಿದೆ.

ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಮೆಳ್ಳಹಳ್ಳಿ ಚಂದ್ರಶೇಖರಮೂರ್ತಿ, ಶಂಕ್ರಪ್ಪ, ಸುಬ್ಬಣ್ಣ, ಮಹದೇವಪ್ಪ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಮಹಿಳೆಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net